ಕರ್ನಾಟಕ

karnataka

ETV Bharat / state

ಪರಿಷತ್ ಚುನಾವಣೆ: ತಮ್ಮನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಶಾಸಕಿ ಹೆಬ್ಬಾಳ್ಕರ್ ಕಸರತ್ತು - ಬೆಳಗಾವಿ ವಿಧಾನ ಪರಿಷತ್​ ಚುನಾವಣೆ

ಎಂಎಲ್​ಸಿ ಚುನಾವಣೆ ಘೋಷಣೆಗೂ ಮುನ್ನವೇ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್​​ ಟಿಕೆಟ್​​​ಗಾಗಿ ಪೈಪೋಟಿ ಶುರುವಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ತಮ್ಮ ಸಹೋದರನಿಗೆ ಟಿಕೆಟ್​ ಕೊಡಿಸಲು ಪ್ರಯತ್ನ ನಡೆಸಿದ್ದು, ಈ ಕುರಿತು ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

mla-lakshmi-hebbalkar-brother-participating-in-mlc-election
ಶಾಸಕಿ ಹೆಬ್ಬಾಳ್ಕರ್

By

Published : Oct 2, 2021, 5:15 PM IST

ಬೆಳಗಾವಿ: ಸ್ಥಳೀಯ ‌ಸಂಸ್ಥೆಗಳ ಮೂಲಕ ವಿಧಾನ ಪರಿಷತ್ ಪ್ರವೇಶಿಸಲು ನಡೆಯುವ ಚುನಾವಣೆಗೆ ಸಹೋದರನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಶಾಸಕಿ ಲಕ್ಷ್ಮಿ ‌ಹೆಬ್ಬಾಳ್ಕರ್ ಕಸರತ್ತು ನಡೆಸಿದ್ದಾರೆ.

ತಮ್ಮನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಶಾಸಕಿ ಹೆಬ್ಬಾಳ್ಕರ್ ಕಸರತ್ತು

ಚುನಾವಣೆ ಘೋಷಣೆಗೂ ಮುನ್ನವೇ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಾಂಗ್ರೆಸ್​‌ ಟಿಕೆಟ್​ಗೆ ಫೈಟ್ ಶುರುವಾಗಿದೆ. ಹೀಗಾಗಿ ತಮ್ಮ ಸಹೋದರನನ್ನು ಎಂಎಲ್‌ಸಿ ಚುನಾವಣೆಗೆ ನಿಲ್ಲಿಸಲು ಶಾಸಕಿ ಹೆಬ್ಬಾಳ್ಕರ್ ಸಿದ್ಧತೆಯಲ್ಲಿ ತೊಡಗಿದ್ದಾರೆ. ನಮ್ಮ ಪಕ್ಷ ಹಾಗೂ ಜಿಲ್ಲೆಯ ನಾಯಕರು ಆಶೀರ್ವದಿಸಿದರೆ ನನ್ನ ತಮ್ಮನನ್ನು ವಿಧಾನ ಪರಿಷತ್​​ ಚುನಾವಣೆಗೆ ನಿಲ್ಲಿಸಲು ಉತ್ಸುಕರಿರುವುದಾಗಿ ಅವರು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ತಮ್ಮ ಯುವಕನಿದ್ದಾನೆ. ಜಿಲ್ಲೆಯ, ರಾಜ್ಯದ ಮುಖಂಡರು ಆಶೀರ್ವದಿಸಿದ್ರೆ ಸ್ಪರ್ಧೆಗಿಳಿಸುತ್ತೇನೆ. ಈಗಾಗಲೇ‌ ನಾವು ಎಂಎಲ್‌ಸಿ ಟಿಕೆಟ್ ಕೇಳಿದ್ದು, ಅರ್ಜಿ‌ ಕೂಡ ಸಲ್ಲಿಸಿದ್ದೇವೆ. ಪಕ್ಷದ ಸಭೆಯಲ್ಲೂ ಸ್ಪರ್ಧೆಯ ಇಂಗಿತವನ್ನು ವ್ಯಕ್ತಪಡಿಸಿದ್ದೇವೆ. 2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಬಹಳಷ್ಟು ಜನ ಒತ್ತಾಯಿಸಿದ್ದರು. ಹೈಕಮಾಂಡ್‌‌ ಮಟ್ಟದಲ್ಲೂ ನನ್ನ ತಮ್ಮನ ಹೆಸರು ಮುಂಚೂಣಿಯಲ್ಲಿತ್ತು. ಲೋಕಸಭೆ ಉಪಚುನಾವಣೆಯಲ್ಲಿ ಎಲ್ಲರೂ ಒಗ್ಗೂಡಿ ಸತೀಶ್ ಜಾರಕಿಹೊಳಿ ಅವರನ್ನು ಅಭ್ಯರ್ಥಿಯಾಗಿ ಮಾಡಿದ್ವಿ. ಈ ಬಾರಿ ಒಂದು ಅವಕಾಶ ಇದೆ, ಯುವಕರು ಮುಂದೆ ಬರ್ತಿದ್ದಾರೆ. ಪಕ್ಷ ಆಶೀರ್ವಾದ ಮಾಡಿದ್ರೆ ಪರಿಷತ್ ಚುನಾವಣೆಗೆ ಟಿಕೆಟ್ ಕೇಳುತ್ತೇವೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ತಿಳಿಸಿದರು.

ABOUT THE AUTHOR

...view details