ಕರ್ನಾಟಕ

karnataka

ETV Bharat / state

ಸಚಿವ ಸ್ಥಾನ ನೀಡಿದ್ರೆ ನಿಭಾಯಿಸುವೆ, ಅದಕ್ಕಾಗಿ ಹಠ ಹಿಡಿಯಲ್ಲ: ಶಾಸಕ ಐಹೊಳೆ - ಸಚಿವ ಸ್ಥಾನದ ಬಗ್ಗೆ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಪ್ರತಿಕ್ರಿಯೆ

ಬಿಜೆಪಿ ಚಿಹ್ನೆಯ ಮೇಲೆ ಮೂರು ಬಾರಿ ಆಯ್ಕೆ ಆಗಿದ್ದೇನೆ. ಪಕ್ಷಕ್ಕೆ ಯಾವುದೇ ಕಾರಣಕ್ಕೂ ದ್ರೋಹ ಮಾಡಲ್ಲ ಎಂದು ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ.

mla-duryodhana-ihole
ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಮಾತನಾಡಿದರು

By

Published : Jan 25, 2022, 9:37 PM IST

ಬೆಳಗಾವಿ: ಸಚಿವ ಸ್ಥಾನ ನೀಡಿದರೆ ನಿಭಾಯಿಸುವೆ. ಆದರೆ, ಸ್ಥಾನಕ್ಕಾಗಿ ಹಠ ಮಾಡುವುದಿಲ್ಲ ಎಂದು ರಾಯಭಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ನಗರದಲ್ಲಿಂದು ಮಾಧ್ಯದಮರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಚಿಹ್ನೆಯ ಮೇಲೆ ಮೂರು ಸಲ ಆಯ್ಕೆ ಆಗಿದ್ದೇನೆ. ಪಕ್ಷಕ್ಕೆ ಯಾವುದೇ ಕಾರಣಕ್ಕೂ ದ್ರೋಹ ಮಾಡಲ್ಲ. ನಾನು ಸಚಿವ ಸ್ಥಾನಮಾನ ಕೇಳುವ ಪ್ರಶ್ನೆ ಇಲ್ಲ. ನನ್ನನ್ನು ಆದಿ ಜಾಂಬವ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ನಿಗಮಕ್ಕೆ ಹಣ ಕೊಡಬೇಕು ಎಂಬುದು ನಮ್ಮ ಬೇಡಿಕೆ. ಸಮಾಜ ದೊಡ್ಡದು ಇದೆ. 500 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದೇವೆ ಎಂದರು.

ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಮಾತನಾಡಿದರು

ಗುಂಪುಗಾರಿಕೆಯನ್ನು ಹೈಕಮಾಂಡ್ ಸರಿಪಡಿಸುತ್ತೆ..ಸಚಿವ ಉಮೇಶ ಕತ್ತಿ ನೇತೃತ್ವದಲ್ಲಿ ಗೌಪ್ಯ ಸಭೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಸಭೆಗೆ ಬರುವಂತೆ ಮಹಾಂತೇಶ ಕವಟಗಿಮಠ ನನಗೂ ಆಹ್ವಾನ ನೀಡಿದ್ದರು. ಹುಟ್ಟುಹಬ್ಬದ ಹಿನ್ನೆಲೆ ಬೇರೆ ಕಾರ್ಯಕ್ರಮದಲ್ಲಿ ಬ್ಯುಸಿ ಆಗಿದ್ದೆ. ಹೀಗಾಗಿ, ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಎರಡು ಗುಂಪು ಆಗಿರುವುದಕ್ಕೆ ಇದಕ್ಕೂ-ನಮಗೂ ಸಂಬಂಧವಿಲ್ಲ. ನಾನು ಪಕ್ಷ, ಕಾರ್ಯಕರ್ತರು, ಕ್ಷೇತ್ರಕ್ಕೆ ಮಾತ್ರ ಸಿಮೀತವಾಗಿದ್ದೇನೆ ಎಂದರು.

ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಮಾತನಾಡಿದರು

ಗುಂಪುಗಾರಿಕೆಯನ್ನು ನಾಯಕರು ಸರಿ ಮಾಡುತ್ತಾರೆ. ಜಿಲ್ಲೆಯ ಗುಂಪುಗಾರಿಕೆ ಬಗ್ಗೆ ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಎರಡು ಗುಂಪುಗಳನ್ನು ಒಂದು ಮಾಡುತ್ತೇವೆ. ಎಲ್ಲರೂ ಒಗ್ಗಟ್ಟಿನಿಂದ ಜಿಲ್ಲಾ ಪಂಚಾಯತ್​​, ತಾಲೂಕು ಪಂಚಾಯತ್ ಚುನಾವಣೆ ಎದುರಿಸುತ್ತೇವೆ. ನಾನಂತೂ ಸಚಿವರಿ ಸ್ಥಾನಕ್ಕಾಗಿ ಗುಂಪುಗಾರಿಕೆ ಮಾಡಲ್ಲ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇವೆ. ಸಚಿವ ಸ್ಥಾನಬೇಕು ಎಂದು ಹಠ ಹಿಡಿಯೊಲ್ಲ ಎಂದು ತಿಳಿಸಿದರು.

ಓದಿ:ಬಿಜೆಪಿಯ ಶಾಸಕರು ಸಿಂಹಗಳಿದ್ದಂತೆ, ಸಿದ್ದರಾಮಯ್ಯ-ಡಿಕೆಶಿ ನೀವು ಹಗಲುಗನಸು ಕಾಣಬೇಡಿ : ರೇಣುಕಾಚಾರ್ಯ

For All Latest Updates

TAGGED:

ABOUT THE AUTHOR

...view details