ಚಿಕ್ಕೋಡಿ: ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರ ಪುತ್ರ ಸರ್ಕಾರಿ ಕಾರನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಆದಿ ಜಾಂಭವ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರಿಗೆ ಸರ್ಕಾರದ ವತಿಯಿಂದ ಕಾರನ್ನು ಮಂಜೂರು ಮಾಡಲಾಗಿದೆ.
ಶಾಸಕರ ಪುತ್ರನಿಂದ ಸರ್ಕಾರಿ ವಾಹನ ದುರ್ಬಳಕೆ ಆರೋಪ - ಬೆಳಗಾವಿ ಜಿಲ್ಲೆಯ ರಾಯಬಾಗ ಮತಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ
ಬೆಳಗಾವಿ ಜಿಲ್ಲೆಯ ರಾಯಬಾಗ ಮತಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆಗೆ ನೀಡಿದ್ದ ಸರ್ಕಾರಿ ಕಾರನ್ನು ಅವರ ಪುತ್ರ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
![ಶಾಸಕರ ಪುತ್ರನಿಂದ ಸರ್ಕಾರಿ ವಾಹನ ದುರ್ಬಳಕೆ ಆರೋಪ MLA Duryodhan Aihole](https://etvbharatimages.akamaized.net/etvbharat/prod-images/768-512-13067591-thumbnail-3x2-lek.jpg)
ಸರ್ಕಾರಿ ವಾಹನ ದುರ್ಬಳಕೆ ಆರೋಪ
ಆದರೆ, ತಂದೆಗೆ ನೀಡಿದ್ದ ಸರ್ಕಾರಿ ಕಾರಿನಲ್ಲಿ ಅವರ ಮಗ ಓಡಾಟ ನಡೆಸಿದ್ದಾನೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಪ್ರಜ್ಞಾವಂತ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದುರ್ಯೋಧನ ಐಹೊಳೆ ಪುತ್ರನಿಂದ ಸರ್ಕಾರಿ ವಾಹನ ದುರ್ಬಳಕೆ
ಶಾಸಕರ ಹಿರಿಯ ಪುತ್ರ ಅರುಣ್ ಐಹೊಳೆ ಸರ್ಕಾರಿ ಕಾರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಿಗಮದ ಅಧ್ಯಕ್ಷರು ಮಾತ್ರ ಸರ್ಕಾರಿ ಕಾರು ಬಳಕೆ ಮಾಡಬೇಕು ಎಂಬ ನಿಯಮ ಇದ್ದರೂ ಸಹ, ಸರ್ಕಾರದಿಂದ ನೀಡಿದ್ದ ಕಾರನ್ನು ಮಗ ಅರುಣ್ಗೆ ನೀಡಿರುವುದಕ್ಕೆ ಶಾಸಕ ದುರ್ಯೋಧನ ಐಹೊಳೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.