ಕರ್ನಾಟಕ

karnataka

ETV Bharat / state

ಪಂಚಮಸಾಲಿ ಮೀಸಲಾತಿ ಇಂದೇ ಘೋಷಿಸಿ.. ಇಲ್ಲವಾದರೆ ನೀವೇ ಬಿಜೆಪಿ ಕೊನೆ ಸಿಎಂ: ಶಾಸಕ ಯತ್ನಾಳ್ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಇಂದೇ ಸಿಎಂ ಬೊಮ್ಮಾಯಿ ಅವರು ಘೋಷಿಸಬೇಕು. ಇಲ್ಲವಾದಲ್ಲಿ ಅವರೇ ಬಿಜೆಪಿ ಸರ್ಕಾರದ ಕೊನೆಯ ಸಿಎಂ ಆಗಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದರು.

mla-basanagouda-patil-yatnal
ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

By

Published : Dec 22, 2022, 11:07 AM IST

Updated : Dec 22, 2022, 11:30 AM IST

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್

ಬೆಳಗಾವಿ:ಇಂದು ಮಧ್ಯಾಹ್ನ ಸಚಿವ ಸಂಪುಟ ಸಭೆ ಇದೆ. ಪಂಚಮಸಾಲಿ ಮೀಸಲಾತಿಗೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏನು ಘೋಷಣೆ ಮಾಡಲಿದ್ದಾರೋ ನೋಡೋಣ. ಮುಂದಿನ ಚುನಾವಣೆಯಲ್ಲಿ ಲಾಭ ಬೇಕಿದ್ದರೆ ಮೀಸಲಾತಿ ಘೋಷಿಸಿ. ಇಲ್ಲವಾದರೆ, ಬಿಜೆಪಿ ಸರ್ಕಾರದ ಕೊನೆಯ ಸಿಎಂ ನೀವೇ ಆಗ್ತೀರಾ ಎಂದು ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಭವಿಷ್ಯ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ಹಿರೇಬಾಗೇವಾಡಿ ಗ್ರಾಮದಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, 2ಎ ಮೀಸಲಾತಿ ನೀಡುವ ಬಗ್ಗೆ ಸಿಎಂಗೆ ಇಂದು ಕೊನೆಯ ದಿನವಾಗಿದೆ. ಅವರೇ ಹೇಳಿದಂತೆ ಇಂದೇ ಮೀಸಲಾತಿ ಬಗ್ಗೆ ಘೋಷಣೆ ಮಾಡಬೇಕು. ಮಧ್ಯಾಹ್ನ ಕ್ಯಾಬಿನೆಟ್​ ಮೀಟಿಂಗ್​ ಇದ್ದು, ಏನು ಘೋಷಣೆ ಬರಲಿದೆ ನೋಡೋಣ ಎಂದರು.

ಮಧ್ಯಂತರ ವರದಿ ಸಲ್ಲಿಕೆಯಾಗಿದೆ ಎಂದು ಹೇಳಲಾಗಿದೆ. 2 ವರ್ಷದಿಂದ ಮಂಡಿಸಲಾಗುತ್ತಿರುವ ಬೇಡಿಕೆಗೆ ಈಗ ಮಧ್ಯಂತರ ವರದಿ ತರಿಸಿಕೊಳ್ಳಲಾಗಿದೆ ಎಂದರೆ ಏನರ್ಥ. ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ಮೀಸಲಾತಿ ನೀಡಬೇಕು. ಇಲ್ಲವಾದಲ್ಲಿ ಅವರೇ ಬಿಜೆಪಿ ಸರ್ಕಾರದ ಕೊನೆಯ ಮುಖ್ಯಮಂತ್ರಿಯಾಗಲಿದ್ದಾರೆ. ಇದಕ್ಕೆಲ್ಲಾ ಬೊಮ್ಮಾಯಿ ಅವರೇ ಕಾರಣರಾಗಲಿದ್ದಾರೆ ಎಂದು ವಾರ್ನಿಂಗ್​ ಕೊಟ್ಟಿದ್ದಾರೆ.

ಓದಿ:ಪಂಚಮಸಾಲಿ ಸಮಾಜದಿಂದ ಪಂಚ ವಿರಾಟ್ ಶಕ್ತಿ ಪ್ರದರ್ಶನ: ಬೆಳಗಾವಿಯಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್​

Last Updated : Dec 22, 2022, 11:30 AM IST

ABOUT THE AUTHOR

...view details