ಕರ್ನಾಟಕ

karnataka

ETV Bharat / state

ಉ.ಕ. ಪ್ರತಿನಿಧಿಗಳು ಬಾಯಿಯೇ ಬಿಡಲಿಲ್ಲ ಅಂದ್ರೆ ಏನ್ ಮಾಡೋದು: ಶಾಸಕ ನಡಹಳ್ಳಿ - MLA A.S. Patil Nadahalli latest news

ನಾನು ಉತ್ತರ ಕರ್ನಾಟಕದ ವಿಷಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಸೋತು ಸುಮ್ಮನಾಗಿದ್ದೇನೆ. ಉತ್ತರ ಕರ್ನಾಟಕದ ಸುಮಾರು 113 ಎಂಎಲ್‌ಎಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಶಾಸಕ ಎ.ಎಸ್‌.ಪಾಟೀಲ್ ನಡಹಳ್ಳಿ ಹೇಳಿದರು.

MLA A.S. Patil Nadahalli
ಶಾಸಕ ಎ.ಎಸ್‌.ಪಾಟೀಲ್ ನಡಹಳ್ಳಿ

By

Published : Mar 11, 2021, 1:50 PM IST

ಬೆಳಗಾವಿ:ಸುವರ್ಣ ಸೌಧಕ್ಕೆ ಕಚೇರಿಗಳ ಸ್ಥಳಾಂತರ ಸೇರಿದಂತೆ ಉ.ಕ.ಭಾಗದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಉತ್ತರ ಕರ್ನಾಟಕ ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ‌ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ್ ನಡಹಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಎ.ಎಸ್‌.ಪಾಟೀಲ್ ನಡಹಳ್ಳಿ ಪ್ರತಿಕ್ರಿಯೆ

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಉತ್ತರ ಕರ್ನಾಟಕದ ವಿಷಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟು ಸೋತು ಸುಮ್ಮನಾಗಿದ್ದೇನೆ. ಉತ್ತರ ಕರ್ನಾಟಕದ ಸುಮಾರು 113 ಎಂಎಲ್‌ಎಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಉತ್ತರ ಕರ್ನಾಟಕದಲ್ಲಿ ಸಂಪನ್ಮೂಲ ಏನಿದೆ? ನಾವು ಏನ್ ಮಾಡಬಹುದು. ಬೀದರ್‌ನಿಂದ ಬೆಳಗಾವಿವರೆಗೆ ಜಲಸಂಪನ್ಮೂಲ, ಖನಿಜ ಸಂಪತ್ತು ಏನಿದೆ? ಎಂಬುವುದು ಸೇರಿದಂತೆ ಸುವರ್ಣ ಸೌಧಕ್ಕೆ ಕಚೇರಿ ಸ್ಥಳಾಂತರಕ್ಕೆ ನಾನು ಧ್ವನಿ ಎತ್ತಿದ್ದೇನೆ. ಆದರೆ, ಉತ್ತರ ಕರ್ನಾಟಕದ ಜನ ಪ್ರತಿನಿಧಿಗಳು ಬಾಯಿಯೇ ಬಿಡಲಿಲ್ಲ ಅಂದ್ರೆ ಏನ್ ಮಾಡೋದು? ಉತ್ತರ ಕರ್ನಾಟಕದ 113 ಶಾಸಕರಲ್ಲಿ ಯಾರು ಬಾಯಿ ಬಿಡ್ತಾ ಇದೀವಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಓದಿ:ಮುದ್ದೇಬಿಹಾಳ ಸಿಂಗಪುರ ಮಾದರಿಯಲ್ಲಿ ಅಭಿವೃದ್ಧಿ, ರೈತರು ಮಿನಿ ಅಂಬಾನಿಗಳಾಗಬೇಕು: ಶಾಸಕ ನಡಹಳ್ಳಿ ಪಣ

ABOUT THE AUTHOR

...view details