ಕರ್ನಾಟಕ

karnataka

ETV Bharat / state

ಬೆಳಗಾವಿ: ಪ್ರಚಾರದ ಮಧ್ಯೆಯೇ ತರಕಾರಿ ಖರೀದಿಸಿದ ಶಾಸಕಿ ನಿಂಬಾಳ್ಕರ್ - Anjali Nimbalkar campaigning for channaraja Hattiholi

ಡಿಸೆಂಬರ್ 10ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ನಾಗರಗಾಳಿಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಪರ ಶಾಸಕಿ ಅಂಜಲಿ ನಿಂಬಾಳ್ಕರ್​ ಪ್ರಚಾರ ನಡೆಸಿದರು. ಪ್ರಚಾರ ಮುಗಿಸಿ ಅವರು ಖಾನಾಪುರಕ್ಕೆ ತೆರಳುತ್ತಿದ್ದರು. ಈ ವೇಳೆ, ಮಾರ್ಗ ಮಧ್ಯೆ ನಂದಗಡ ಗ್ರಾಮದ ವಾರದ ಸಂತೆ ನಡೆಯುತ್ತಿದ್ದ ಮಾರುಕಟ್ಟೆಗೆ ಅವರು ಭೇಟಿ ನೀಡಿದರು.

mla-anjali-nimbalkar-purchased-vegetables-in-belagavi
ತರಕಾರಿ ಖರೀದಿಸಿದ ಶಾಸಕಿ ನಿಂಬಾಳ್ಕರ್

By

Published : Dec 2, 2021, 5:02 PM IST

ಬೆಳಗಾವಿ: ಪರಿಷತ್ ಚುನಾವಣೆಯ ಪ್ರಚಾರದ ಮಧ್ಯೆಯೇ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ನಂದಗಡ ಗ್ರಾಮದ ವಾರದ ಸಂತೆಯಲ್ಲಿ ತರಕಾರಿ ಖರೀದಿಸಿ ಗಮನ ಸೆಳೆದರು.

ಡಿಸೆಂಬರ್ 10ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ನಾಗರಗಾಳಿಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಪರ ಶಾಸಕಿ ಅಂಜಲಿ ನಿಂಬಾಳ್ಕರ್​ ಪ್ರಚಾರ ನಡೆಸಿದರು. ಪ್ರಚಾರ ಮುಗಿಸಿ ಅವರು ಖಾನಾಪುರಕ್ಕೆ ತೆರಳುತ್ತಿದ್ದರು. ಈ ವೇಳೆ, ಮಾರ್ಗ ಮಧ್ಯೆ ನಂದಗಡ ಗ್ರಾಮದ ವಾರದ ಸಂತೆ ನಡೆಯುತ್ತಿದ್ದ ಮಾರುಕಟ್ಟೆಗೆ ಅವರು ಭೇಟಿ ನೀಡಿದರು.

ತರಕಾರಿ ಖರೀದಿಸಿದ ಶಾಸಕಿ ನಿಂಬಾಳ್ಕರ್

ಕ್ಯಾರೆಟ್, ಬೀಟ್‌ರೂಟ್, ಸೌತೆಕಾಯಿ, ಪಾಲಕ್, ಬೀನ್ಸ್ ಸೇರಿ ಇತರ ತರಕಾರಿ ಖರೀದಿಸಿದರು. ಸಾಮಾನ್ಯ ಗೃಹಿಣಿಯಂತೆ ಶಾಸಕಿ ತರಕಾರಿ ಖರೀದಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಓದಿ:ಹೆಚ್.ಡಿ.ದೇವೇಗೌಡರ ಜೀವನ ಚರಿತ್ರೆ ಡಿ.13 ರಂದು ಬಿಡುಗಡೆ

ABOUT THE AUTHOR

...view details