ಕರ್ನಾಟಕ

karnataka

ETV Bharat / state

ಒಂಟಿಯಾಗಿ ಜೀವಿಸುತ್ತಿರುವ ಮೋದಿಯವರ ಬಗ್ಗೆ ಏನು ಹೇಳುವಿರಿ?: ಸಚಿವ ಸುಧಾಕರ್​ಗೆ ಶಾಸಕಿ ನಿಂಬಾಳ್ಕರ್ ಪ್ರಶ್ನೆ - ಡಾ. ಕೆ ಸುಧಾಕರ್ ಹೇಳಿಕೆ ವಿರುದ್ದ ಶಾಸಕಿ ನಿಂಬಾಳ್ಕರ್ ತಿರುಗೇಟು

ಆಧುನಿಕ ಮಹಿಳೆ ತನಗೆ ಇಷ್ಟ ಬಂದಂತೆ ಜೀವಿಸಲಿ. ಇದನ್ನು ಬೇರೆಯವರು ನಿರ್ಧರಿಸೋದಲ್ಲ. ಆಕೆಯೇ ನಿರ್ಧರಿಸಬೇಕು ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಟ್ವೀಟ್​ ಮೂಲಕ ಸಚಿವ ಡಾ. ಸುಧಾಕರ್​ಗೆ ಟಾಂಗ್​ ಕೊಟ್ಟಿದ್ದಾರೆ.

mla-anjali-nimbalkar-outrage-against-minister-sudhakar
ಸುಧಾಕರ್ ಹಾಗೂ ಶಾಸಕಿ ಅಂಜಲಿ ನಿಂಬಾಳ್ಕರ್

By

Published : Oct 11, 2021, 5:59 PM IST

ಬೆಳಗಾವಿ: ಆಧುನಿಕ ಮಹಿಳೆಯರು ಒಂಟಿಯಾಗಿ ಜೀವನ ನಡೆಸಲು ಬಯಸುತ್ತಾರೆ ಎಂಬ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರ ಹೇಳಿಕೆಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ತಿರುಗೇಟು ನೀಡಿದ್ದಾರೆ. ಸಚಿವರಿಗೆ ಆಪ್ತ ಸಮಾಲೋಚನೆಯ ಅವಶ್ಯಕತೆ ಇದೆ ಎಂದು ಕುಟುಕಿದ್ದಾರೆ.

ಆಧುನಿಕ ಮಹಿಳೆ ತನಗೆ ಇಷ್ಟ ಬಂದಂತೆ ಜೀವಿಸಲಿ. ಇದನ್ನು ಬೇರೆಯವರು ನಿರ್ಧರಿಸೋದಲ್ಲ. ಆಕೆಯೇ ನಿರ್ಧರಿಸಬೇಕು. ಮದುವೆಯಾದ ಬಳಿಕವೂ ಒಂಟಿಯಾಗಿ ಜೀವಿಸುತ್ತಿರುವ ನಿಮ್ಮ ನಾಯಕ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಏನಾದರೂ ಪ್ರತಿಕ್ರಿಯೆಗಳಿವೆಯಾ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ನಡೆದಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಸಚಿವ ಡಾ. ಕೆ ಸುಧಾಕರ್ ಭಾಗಿಯಾಗಿದ್ದರು. ಈ ವೇಳೆ ಅವರು ಮಾತನಾಡಿ, ದೇಶದಲ್ಲಿನ‌ ಆಧುನಿಕ ಮಹಿಳೆಯರು ಒಬ್ಬರೇ ಜೀವಿಸಲು ಬಯಸುತ್ತಿದ್ದಾರೆ. ವಿವಾಹವಾದರೂ ಮಕ್ಕಳಿಗೆ ಜನ್ಮನೀಡಲು‌ ಇಷ್ಟಪಡುತ್ತಿಲ್ಲ. ಬದಲಾಗಿ ಬಾಡಿಗೆ ತಾಯ್ತನ ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದರು.

ಓದಿ:ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ರಾಜಭವನದಲ್ಲಿ ಸನ್ಮಾನ..

ABOUT THE AUTHOR

...view details