ಬೆಳಗಾವಿ: ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಆ್ಯಂಬುಲೆನ್ಸ್ ಓಡಿಸುವ ಮೂಲಕ ಗಮನ ಸೆಳೆದರು. ತಾಲೂಕು ಆಸ್ಪತ್ರೆಯ ಆವರಣದಲ್ಲಿ ನಾಲ್ಕು ಆ್ಯಂಬುಲೆನ್ಸ್ಗಳಿಗೆ ಚಾಲನೆ ನೀಡಿದ ಅವರು ನಂತರ ಪಟ್ಟಣದಲ್ಲಿ ಆ್ಯಂಬುಲೆನ್ಸ್ ಓಡಿಸಿದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ನಾಲ್ಕು ಆ್ಯಂಬುಲೆನ್ಸ್ ಖರೀದಿಸಿ ತಾಲೂಕು ಆಸ್ಪತ್ರೆಗೆ ಹಸ್ತಾಂತರಿಸಿದರು.
ಆ್ಯಂಬುಲೆನ್ಸ್ ಓಡಿಸಿ ಗಮನ ಸೆಳೆದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಕಳೆದ ವರ್ಷ ಶಾಸಕಿ ಅಂಜಲಿ ಸರ್ಕಾರದಿಂದ ಖಾನಾಪುರ ತಾಲೂಕಾಸ್ಪತ್ರೆಗೆ ನಾಲ್ಕು ಆ್ಯಂಬುಲೆನ್ಸ್ ಮಂಜೂರು ಮಾಡಿಸಿದ್ದರು. ಕೊರೊನಾ ಒಂದನೇ ಅಲೆ ಹೊಡೆತಕ್ಕೆ ತತ್ತರಿಸಿದ್ದ ಖಾನಾಪುರ ಕ್ಷೇತ್ರದಲ್ಲೀಗ ಎರಡನೇ ಅಲೆಯ ಅಬ್ಬರವೂ ಜೋರಾಗಿದೆ. ನೆರೆಯ ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಖಾನಾಪುರ ತಾಲೂಕಿನ ಬಹುತೇಕರು ವಲಸೆ ಹೋಗುತ್ತಾರೆ. ಉಭಯ ರಾಜ್ಯಗಳಲ್ಲಿ ಲಾಕ್ಡೌನ್ ಇರುವ ಕಾರಣ ಅವರೆಲ್ಲ ತಮ್ಮೂರಿಗೆ ಮರಳಿದ್ದಾರೆ. ಹೀಗಾಗಿ ವಲಸಿಗರಿಂದ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ.
ಆ್ಯಂಬುಲೆನ್ಸ್ಗಳಿಗೆ ಚಾಲನೆ ನೀಡಿದ ಶಾಸಕಿ ಅಂಜಲಿ ನಿಂಬಾಳ್ಕರ್ ಕೊರೊನಾದಿಂದ ಬಳಲುತ್ತಿರುವ ಕ್ಷೇತ್ರದ ಜನರಿಗೆ ಅನುಕೂಲ ಕಲ್ಪಿಸಲು ಶಾಸಕಿ ಆ್ಯಂಬುಲೆನ್ಸ್ ಖರೀದಿಸಿ ತಾಲೂಕು ಆಸ್ಪತ್ರೆಗೆ ನೀಡಿದ್ದಾರೆ. ಕಳೆದ ವಾರ ಶಾಸಕಿ ಅಂಜಲಿ ತಮ್ಮ ಸ್ವಂತ ಖರ್ಚಿನಲ್ಲಿ 8 ಆಕ್ಸಿಜನ್ ಕಾನ್ಸಟ್ರೇಟರ್ ಖರೀದಿಸಿ ತಾಲೂಕು ಆಸ್ಪತ್ರೆಗೆ ನೀಡಿದ್ದರು.
ಓದಿ:'100 ನಾಟ್ ಔಟ್': ಬೈಕ್ಗೆ ಪೆಟ್ರೋಲ್ ಹಾಕಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಭಟನೆ