ಬೆಳಗಾವಿ:ಶಾಸಕ ಅನಿಲ್ ಬೆನಕೆ ಬೆಳಗಾವಿ ಜಿಲ್ಲಾಡಳಿತಕ್ಕೆ 35 ಜಂಬೋ ಸಿಲಿಂಡರ್ ಆಕ್ಸಿಜನ್, 10 ಆಕ್ಸಿಜನ್ ಕಾನ್ಸಂಟ್ರೇಟರ್ ಮಷಿನ್ ಹಸ್ತಾಂತರಿಸಿದರು. ಈ ಪೈಕಿ ಬಿಮ್ಸ್‌ಗೆ 30, ಮಹಾನಗರ ಪಾಲಿಕೆಗೆ 5 ಜಂಬೋ ಸಿಲಿಂಡರ್ ಹಸ್ತಾಂತರ ಮಾಡಲಾಯಿತು.
ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ಅವರಿಗೆ ಆಕ್ಸಿಜನ್ ಸಿಲಿಂಡರ್ ಹಾಗೂ ಆಕ್ಸಿಜನ್ ಕಾನ್ಸಂಟ್ರೇಟರ್ ಮಷಿನ್ಗಳನ್ನು ಶಾಸಕ ಬೆನಕೆ ಹಸ್ತಾಂತರಿಸಿದರು.