ಕರ್ನಾಟಕ

karnataka

ETV Bharat / state

'ಬಂಡಾಯವೆದ್ದ ಬಹುತೇಕರು ಬಿಜೆಪಿಗರಲ್ಲ, ಬಿಜೆಪಿ ಓಟಿಗಾಗಿ ಬಂಡಾಯ ಅಂತಿದ್ದಾರೆ'

ಬೆಳಗಾವಿ ಪಾಲಿಕೆ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಪ್ರಚಾರ ಕಾರ್ಯದಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗುವ ಸಾಧ್ಯತೆ ಇದೆ. ಜೊತೆಗೆ ಹಲವು ಶಾಸಕರು ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.

By

Published : Aug 25, 2021, 10:07 AM IST

MLA Abhya patil
ಶಾಸಕ ಅಭಯ್ ಪಾಟೀಲ

ಬೆಳಗಾವಿ: ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಜೊತೆಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು 9 ವಾರ್ಡ್​ನಲ್ಲಿ ಅಭ್ಯರ್ಥಿಗಳನ್ನು ಹಾಕಿಲ್ಲ. ಕಾಂಗ್ರೆಸ್​​ನ ಬಿ ಟೀಮ್ ಎಂಇಎಸ್. ಎಂಇಎಸ್​​​ನ ಬಿ ಟೀಮ್ ಕಾಂಗ್ರೆಸ್ ಎಂದು ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 58 ವಾರ್ಡ್​​ಗಳ ಪೈಕಿ ಸಮಯದ ಅಭಾವದಿಂದ ಎರಡು ವಾರ್ಡ್​​ನಲ್ಲಿ ಬಿಜೆಪಿ ಬಿ ಫಾರ್ಮ್​​​​​​ಗಳು ಸ್ವೀಕೃತವಾಗಿಲ್ಲ. ಉಳಿದಂತೆ ಎಲ್ಲಾ ಕಡೆ ಅಭ್ಯರ್ಥಿಗಳ ಬಿ ಫಾರ್ಮ್ ಸ್ವೀಕೃತವಾಗಿವೆ ಎಂದರು.

ಬಂಡಾಯವೆದ್ದ ಬಹುತೇಕರು ಬಿಜೆಪಿಗರಲ್ಲ ಎಂದ ಶಾಸಕ ಅಭಯ್ ಪಾಟೀಲ್​​

ಬಂಡಾಯ ಮಾಡಿದವರು ಬಹುತೇಕರು ಬಿಜೆಪಿಗರಲ್ಲ‌. ಕೆಲವೊಂದು ವಾರ್ಡ್​​ನಲ್ಲಿ ಓಟು ಬರ್ತಾವೆ ಎಂದುಕೊಂಡು ಬಂಡಾಯ ಅಭ್ಯರ್ಥಿಗಳೆಂದು ಹೇಳ್ತಿದ್ದಾರೆ. ಒಂದು ವಾರ್ಡ್​​ನಲ್ಲಿ ಸಮಸ್ಯೆಯಿದೆ, ಅವರನ್ನು ಇವತ್ತು ಸಂಪರ್ಕಿಸಿ ಸರಿ ಮಾಡುತ್ತೇವೆ ಎಂದರು.

ಕಳೆದ ಲೋಕಸಭೆ ಚುನಾವಣೆಯಿಂದ ಎಂಇಎಸ್​​ನವರು ಎಲ್ಲಾ ಕಡೆಯೂ ಬಿಜೆಪಿಯನ್ನು ಬೈಯುತ್ತಿದ್ದಾರೆ. ಎಲ್ಲಿಯೂ ಕೂಡ ಕಾಂಗ್ರೆಸನವರಿಗೆ ಬೈಯುತ್ತಿಲ್ಲ. ಹೀಗಾಗಿ ಕಾಂಗ್ರೆಸ್​​​ನ ಬಿ ಟೀಮ್ ಎಂಇಎಸ್. ಎಂಇಎಸ್​​ನ ಬಿ ಟೀಮ್ ಕಾಂಗ್ರೆಸ್ ಎಂದು ವ್ಯಂಗ್ಯವಾಡಿದರು. ಇದಲ್ಲದೇ ನಿನ್ನೆ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು ಇಂದು ಅಭ್ಯರ್ಥಿ ಜೊತೆಗೆ ವಾರ್ಡ್​​ನಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಪ್ರಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬರ್ತಾರೆ. ಪ್ರತಿ ನಾಲ್ಕು ವಾರ್ಡುಗಳಿಗೆ ಒಬ್ಬ ಶಾಸಕರು ಉಸ್ತುವಾರಿ ನೀಡಲಾಗಿದೆ. ಈಗಾಗಲೇ ಬೆಂಗಳೂರಿನಿಂದ ಶಾಸಕ ಸತೀಶ್ ರೆಡ್ಡಿ ಪ್ರಚಾರಕ್ಕೆ ಬಂದಿದ್ದಾರೆ. ಬೆಂಗಳೂರಿನಿಂದ 25 ಜನ ಪಾಲಿಕೆ ಸದಸ್ಯರು ಪ್ರಚಾರಕ್ಕೆ ಬರಲಿದ್ದಾರೆ ಎಂದರು.

ಇದನ್ನೂ ಓದಿ:ಸೆ.3ರಂದು ಪಾಲಿಕೆ ಚುನಾವಣೆ : ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಪೊಲೀಸರಿಂದ ಪಥಸಂಚಲನ

ABOUT THE AUTHOR

...view details