ಬೆಳಗಾವಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಶಾಸಕ ಅಭಯ ಪಾಟೀಲ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ. ಬೆಳಗಾವಿ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ನಿನ್ನೆ ಸಿಎಂ ನಡೆಸಿದ್ದ ರೋಡ್ ಶೋನಲ್ಲಿ ಶಾಸಕ ಅಭಯ್ ಪಾಟೀಲ್ ಭಾಗಿಯಾಗಿದ್ದರು.
ಸಿಎಂ ಸಂಪರ್ಕಕ್ಕೆ ಬಂದಿದ್ದ ಶಾಸಕ ಅಭಯ ಪಾಟೀಲ ಕೊರೊನಾ ವರದಿ ನೆಗಟಿವ್ - ಶಾಸಕ ಅಭಯ ಪಾಟೀಲ ಕೊರೊನಾ ವರದಿ ನೆಗಟಿವ್
ರ‌್ಯಾಪಿಡ್ ಟೆಸ್ಟ್ ನಡೆಸಿದ್ದ ಶಾಸಕ ಅಭಯ್ ಪಾಟೀಲ್‌ಗೆ ಕೊರೊನಾ ವರದಿ ನೆಗೆಟಿವ್ ಬಂದಿದೆ. ಇದೇ ರೋಡ್ ಶೋ ವೇಳೆ ಜ್ವರ ಕಾಣಿಸಿದ್ದ ಹಿನ್ನೆಲೆಯಲ್ಲಿ ಸಿಎಂ ಅರ್ಧಕ್ಕೆ ಹೋಟೆಲ್‌ಗೆ ಮರಳಿದ್ದರು..
Mla corona
ಸಿಎಂ ಬಿಎಸ್‌ವೈಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶಾಸಕ ಅಭಯ ಪಾಟೀಲ ಇಂದು ಕೋವಿಡ್ ರ‌್ಯಾಪಿಡ್ ಟೆಸ್ಟ್ ಮಾಡಿಸಿದ್ದರು. ರ‌್ಯಾಪಿಡ್ ಟೆಸ್ಟ್ ನಡೆಸಿದ್ದ ಶಾಸಕ ಅಭಯ್ ಪಾಟೀಲ್‌ಗೆ ಕೊರೊನಾ ವರದಿ ನೆಗೆಟಿವ್ ಬಂದಿದೆ. ಇದೇ ರೋಡ್ ಶೋ ವೇಳೆ ಜ್ವರ ಕಾಣಿಸಿದ್ದ ಹಿನ್ನೆಲೆಯಲ್ಲಿ ಸಿಎಂ ಅರ್ಧಕ್ಕೆ ಹೋಟೆಲ್‌ಗೆ ಮರಳಿದ್ದರು.
ಸಿಎಂ ಅನುಪಸ್ಥಿತಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್ ಹಾಗೂ ಶಾಸಕ ಅಭಯ ಪಾಟೀಲ ರೋಡ್ ಶೋ ಮುಂದುವರೆಸಿ ಯಶಸ್ವಿಗೊಳಿಸಿದ್ದರು.