ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ನೂತನ ಸಚಿವ ಸಿ.ಪಿ. ಯೋಗೇಶ್ವರ್ ಅವರ ಪಾತ್ರ ಏನಿದೆ ಎಂದು ನನಗೆ ಗೊತ್ತಿಲ್ಲ ಎಂದು ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ ಪಾಟೀಲ ಹೇಳಿದರು.
1990ರಲ್ಲಿ ಸಿ.ಪಿ. ಯೋಗೇಶ್ವರ್ ಎಲ್ಲಿದ್ದರು ?: 'ಸೈನಿಕ'ನ ವಿರುದ್ಧ ಅಭಯ ಪಾಟೀಲ ಗುಡುಗು..!
1990ರಲ್ಲಿ ನಾವು ಪಕ್ಷ ಸಂಘಟನೆ ಮಾಡುವಾಗ ಸಿ.ಪಿ. ಯೋಗೇಶ್ವರ್ ನಗುತ್ತಿದ್ದರು ಎಂದು ಶಾಸಕ ಅಭಯ ಪಾಟೀಲ ಹೇಳಿದರು.
ಅಭಯ್ ಪಾಟೀಲ್ ಗುಡುಗು
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1990ರಲ್ಲಿ ನಾವು ಪಕ್ಷ ಸಂಘಟನೆ ಮಾಡುವಾಗ ಸಿ.ಪಿ. ಯೋಗೇಶ್ವರ್ ನಗುತ್ತಿದ್ದರು. ಆಗ ಅವರು ಎಲ್ಲಿದ್ದರು ಅನ್ನೋದನ್ನು ತಿಳಿದುಕೊಳ್ಳಬೇಕು ಎಂದರು.
ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಅವರು ನಮಗೆ ಏನೂ ಹೇಳುವ ಅವಶ್ಯಕತೆಯಿಲ್ಲ. ಪಕ್ಷದ ವರಿಷ್ಠರು ನಮಗೆ ಹೇಳುತ್ತಾರೆ. ನಾನು ಅಸಮಾಧಾನಗೊಂಡಿಲ್ಲ, ನನ್ನ ಭಾವನೆಗಳನ್ನ ತೋಡಿಕೊಂಡಿದ್ದೇನೆ ಹಾಗೂ ಅಸಮಾಧಾನಿತ ಶಾಸಕರು ಯಾರೂ ನನ್ನ ಸಂಪರ್ಕ ಮಾಡಿಲ್ಲ ಎಂದರು.