ಬೆಳಗಾವಿ : ಕೊರೊನಾ ಹರಡುವ ಭೀತಿ ಹಿನ್ನೆಲೆ ಏ.14ರವರೆಗೂ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ನ್ಯಾಯ ಬೆಲೆ ಅಂಗಡಿಗಳ ಮುಂದೆ ಜನರು ಸಾಲಾಗಿ ನಿಂತುಕೊಂಡು ಪಡಿತರ ಚೀಟಿ ಪಡೆಯುತ್ತಿದ್ದರು. ಇದನ್ನು ಕಂಡು ಶಾಸಕ ಅಭಯ್ ಪಾಟೀಲ್ ಕೆಂಡಾಮಂಡಲವಾಗಿದ್ದಾರೆ.
ಇಲಾಖೆ ಸಿಬ್ಬಂದಿ ವಿರುದ್ಧ ಗರಂ ಆದ ಶಾಸಕ ಅಭಯ್ ಪಾಟೀಲ್..
ಈ ವೇಳೆ ಆಹಾರ ಇಲಾಖೆ ಸಿಬ್ಬಂದಿ ವಿರುದ್ಧ ಗರಂ ಆದ ಅವರು, ನಿಮ್ಮನ್ನು ಸಸ್ಪೆಂಡ್ ಮಾಡ್ತೀನಿ. ಹತ್ತು ಜನರಿಗೆ ಪಡಿತರ ನೀಡಿ ವಾಪಸ್ ಕಳುಹಿಸಿ, ಅದನ್ನು ಬಿಟ್ಟು ಸಾಲಿನಲ್ಲಿ ಏಕೆ ನಿಲ್ಲಿಸುತ್ತೀರಿ. ಗ್ರಾಹಕರಿಗೆ ಫೋನ್ ಮಾಡಿ ಟೈಮಿಂಗ್ ನೀಡಿ ಪಡಿತರವನ್ನು ವಿತರಿಸಬೇಕು ಎಂದು ಗದರಿಸಿದರು.
ಇಲಾಖೆ ಸಿಬ್ಬಂದಿಗಳ ವಿರುದ್ಧ ಗರಂ ಶಾಸಕ ಅಭಯ್ ಪಾಟೀಲ್
ಈ ವೇಳೆ ಆಹಾರ ಇಲಾಖೆ ಸಿಬ್ಬಂದಿ ವಿರುದ್ಧ ಗರಂ ಆದ ಅವರು, ನಿಮ್ಮನ್ನು ಸಸ್ಪೆಂಡ್ ಮಾಡ್ತೀನಿ. ಹತ್ತು ಜನರಿಗೆ ಪಡಿತರ ನೀಡಿ ವಾಪಸ್ ಕಳುಹಿಸಿ, ಅದನ್ನು ಬಿಟ್ಟು ಸಾಲಿನಲ್ಲಿ ಏಕೆ ನಿಲ್ಲಿಸುತ್ತೀರಿ. ಗ್ರಾಹಕರಿಗೆ ಫೋನ್ ಮಾಡಿ ಟೈಮಿಂಗ್ ನೀಡಿ ಪಡಿತರವನ್ನು ವಿತರಿಸಬೇಕು ಎಂದು ಗದರಿಸಿದರು.
ಅಲ್ಲದೇ ಈ ವೇಳೆ ನ್ಯಾಯಬೆಲೆ ಅಂಗಡಿ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡ ಶಾಸಕರು ಪ್ರತಿ ಗಂಟೆಗೆ 10 ಜನರಿಗೆ ಪಡಿತರ ಪಡೆಯಲು ಬರುವಂತೆ ಹೇಳಲು ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಸಾಲಿನಲ್ಲಿ ಜನ ನಿಲ್ಲದಂತೆ ನೋಡಿಕೊಳ್ಳುವಂತೆ ವಾರ್ನಿಂಗ್ ಮಾಡಿದರು.