ಕರ್ನಾಟಕ

karnataka

ETV Bharat / state

ಬೆಳಗಾವಿ ಮೇಯರ್ - ಉಪಮೇಯರ್ ಆಯ್ಕೆ ಕಸರತ್ತು: ದಿಢೀರ್ ಬೆಂಗಳೂರಿಗೆ ತೆರಳಿದ ಅಭಯ್ ಪಾಟೀಲ

ಮಹಾನಗರ ಪಾಲಿಕೆ ಚುನಾವಣೆ ಬಳಿಕ ಇದೀಗ ಮೇಯರ್ - ಉಪಮೇಯರ್ ಸ್ಥಾನ ಯಾರಾ ಪಾಲಾಗಲಿದೆ ಎಂಬ ಕುತೂಹಲ ಮೂಡಿದೆ. ಈಗಾಗಲೇ ಜಾತಿ ಲೆಕ್ಕಾಚಾರದಿಂದ ಹಿಡಿದು, ಮುಂಬರುವ ಚುನಾವಣೆಯ ದೃಷ್ಟಿಯಿಂದ ಮೇಯರ್ ಸ್ಥಾನ ಅಂತಿಮವಾಗಲಿದೆ ಎನ್ನಲಾಗ್ತಿದೆ.

mla-abhay-patil
ಅಭಯ ಪಾಟೀಲ

By

Published : Sep 8, 2021, 8:54 AM IST

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತೀಹೆಚ್ಚು ಸ್ಥಾನದಲ್ಲಿ ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಇದೀಗ ಮೇಯರ್ - ಉಪಮೇಯರ್ ಆಯ್ಕೆಗಾಗಿ ತೀವ್ರ ಕಸರತ್ತು ಆರಂಭಿಸಿದೆ.

ಮೇಯರ್ ಸಾಮಾನ್ಯ ಹಾಗೂ ಉಪಮೇಯರ್ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹೀಗಾಗಿ ಯಾರನ್ನು ಮೇಯರ್ ಮಾಡಬೇಕು ಎಂಬುದರ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲು ಶಾಸಕ ಅಭಯ್ ಪಾಟೀಲ್ ಬೆಂಗಳೂರಿಗೆ ತೆರಳಲಿದ್ದಾರೆ. ಅಭಯ್ ಪಾಟೀಲ್ ಮಹಾನಗರ ಪಾಲಿಕೆ ಚುನಾವಣಾ ಬಿಜೆಪಿ ಉಸ್ತುವಾರಿಯಾಗಿದ್ದರು. ಮೇಯರ್ ಹಾಗೂ ಉಪಮೇಯರ್ ಆಯ್ಕೆ ಸಂಬಂಧ ಇಂದು ಮತ್ತು ನಾಳೆ ಶಾಸಕರು ಬೆಂಗಳೂರಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಮೇಯರ್ ಸ್ಥಾನಕ್ಕೆ ಲಿಂಗಾಯತ ಹಾಗೂ ಮರಾಠಾ ಎರಡೂ ಸಮುದಾಯದ ನಾಯಕರಿಂದ ಒತ್ತಡ ಬರುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮೇಯರ್ - ಉಪಮೇಯರ್ ಆಯ್ಕೆ ಮಾಡುವ ಸಾಧ್ಯತೆ ಇದೆ. ಜಾತಿ ಲೆಕ್ಕಾಚಾರದಂತೆ ಮರಾಠಾ ಸಮುದಾಯಕ್ಕೆ ಮೇಯರ್ ಸ್ಥಾನ, ಲಿಂಗಾಯತ ಸಮುದಾಯಕ್ಕೆ ಉಪಮೇಯರ್ ಸ್ಥಾನ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಗಣೇಶ ಚತುರ್ಥಿ ಆಚರಣೆ ಮಾರ್ಗಸೂಚಿಗೆ ಶಿವಮೊಗ್ಗದಲ್ಲಿ ತೀವ್ರ ವಿರೋಧ

ABOUT THE AUTHOR

...view details