ಕರ್ನಾಟಕ

karnataka

ETV Bharat / state

ವಿವಿಧ ಸಂಘಟನೆಗಳಿಂದ ಭಾರತ ಬಂದ್​​ಗೆ ಕರೆ: ಚಿಕ್ಕೋಡಿಯಲ್ಲಿ ಮಿಶ್ರ ಪ್ರತಿಕ್ರಿಯೆ

ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್​ಗೆ ಚಿಕ್ಕೋಡಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Mixed response in Chikkodi for Bharat Band
ಭಾರತ ಬಂದ್​​ಗೆ ಚಿಕ್ಕೋಡಿಯಲ್ಲಿ ಮಿಶ್ರ ಪ್ರತಿಕ್ರಿಯೆ

By

Published : Jan 8, 2020, 8:54 AM IST

Updated : Jan 8, 2020, 4:28 PM IST

ಚಿಕ್ಕೋಡಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ನಿರ್ಧಾರಗಳ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳು ಭಾರತ ಬಂದ್​​ಗೆ ಕರೆ ನೀಡಿದ್ದು, ಇದಕ್ಕೆ ಚಿಕ್ಕೋಡಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಅಂಗಡಿ ಮುಂಗಟ್ಟುಗಳು ಪ್ರಾರಂಭವಾಗಿದ್ದು, ಜನ ವ್ಯಾಪಾರ ವಹಿವಾಟು ಪ್ರಾರಂಭಿಸಿದ್ದಾರೆ.

ಭಾರತ ಬಂದ್​​ಗೆ ಚಿಕ್ಕೋಡಿಯಲ್ಲಿ ಮಿಶ್ರ ಪ್ರತಿಕ್ರಿಯೆ

ರಾತ್ರಿ ಹೋಗಿರುವಂತಹ ಕೆಎಸ್​ಆರ್​ಟಿಸಿ ಬಸ್​​ಗಳು ಮರಳಿ ಡಿಪೋ ಕಡೆ ಆಗಮಿಸುತ್ತಿದ್ದು, ಬಸ್​ ಸಂಚಾರ ಯಥಾಸ್ಥಿತಿ ಮುಂದುವರೆಯಲಿದೆ. ಶಿಕ್ಷಣ ಇಲಾಖೆ ಭಾರತ್ ಬಂದಗೆ ಬೆಂಬಲ ಸೂಚಿಸಿಲ್ಲ.

ಚಿಕ್ಕೋಡಿ ಪಟ್ಟಣದಲ್ಲಿ ಮುಂಜಾನೆ 11 ಗಂಟೆಗೆ ಬಂದ್​ಗೆ ಬೆಂಬಲ ಸೂಚಿಸಿದ ಕಾರ್ಮಿಕರು ಹಳೆ ನೌಕರರ ಭವನದಿಂದ ಕೆಸಿ ರೋಡ್​​ ಮುಖಾಂತರ ಕೋರೆ ನಗರಕ್ಕೆ ಬಂದು ಬಸವೇಶ್ವರ ಸರ್ಕಲ್​ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಲಿದ್ದಾರೆ. ಬಳಿಕ ತಹಶೀಲ್ದಾರ್​ ಮೂಲಕ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.

Last Updated : Jan 8, 2020, 4:28 PM IST

ABOUT THE AUTHOR

...view details