ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ನಾಪತ್ತೆಯಾಗಿದ್ದ ಸುಬೇದಾರ್ ತಿಂಗಳ ಬಳಿಕ ಪತ್ತೆ.. ಖಿನ್ನತೆಯಿಂದ ಹಳೆಯದೆಲ್ಲ ಮರೆವು

ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮರಾಠ ಲಘು ಪದಾತಿ ದಳದ ಸುಬೇದಾರ್-ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆ- ಸುರ್ಜೀತ್​ ಸಿಂಗ್​ ಪತ್ತೆಯಾಗಿರುವ ಅಧಿಕಾರಿ

missing-subedar-of-training-wing-found-in-belagavi
ಬೆಳಗಾವಿ: ನಾಪತ್ತೆಯಾಗಿದ್ದ ಟ್ರೈನಿಂಗ್ ವಿಂಗ್ ಸುಬೇದಾರ್ ಸರಿಸುಮಾರು ತಿಂಗಳ ಬಳಿಕ ಪತ್ತೆ

By

Published : Jul 9, 2022, 1:20 PM IST

ಬೆಳಗಾವಿ: ಕಳೆದ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮರಾಠ ಲಘುಪದಾತಿ ದಳದ ಕಮಾಂಡೋ ಟ್ರೈನಿಂಗ್ ವಿಂಗ್​ನ ಸುಬೇದಾರ್ ಅಸ್ವಸ್ಥ ಸ್ಥಿತಿಯಲ್ಲಿ ನಗರದ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ನಗರದ ಕ್ಯಾಂಪ್‌ ಪ್ರದೇಶದಿಂದ‌ ಜೂನ್​ 12ರಂದು‌ ಮಧ್ಯಾಹ್ನ ಸುರ್ಜೀತಸಿಂಗ್ ನಾಪತ್ತೆ ಆಗಿದ್ದರು.‌

ಎಟಿಎಂನಿಂದ‌‌ ಹಣ ಪಡೆಯಲು ಹೋದವರು ಮರಳಿ ಬಂದಿರಲಿಲ್ಲ.‌ ಮೊಬೈಲ್ ಟ್ರೇಸ್ ಮಾಡಿದರೂ ಸಿಕ್ಕಿರಲಿಲ್ಲ.‌ ಸೇನಾಧಿಕಾರಿಯನ್ನು ಯಾರಾದರೂ ಅಪಹರಣ ಮಾಡಿದ್ದಾರೆಯೇ ಎಂಬ ಅನುಮಾನ ಮೂಡಿತ್ತಲ್ಲದೆ, ಸೇನಾ ವಲಯದಲ್ಲಿ ಆತಂಕಕ್ಕೆ‌ ಕಾರಣವಾಗಿತ್ತು.‌

ಸುಬೇದಾರ್ ಸುರ್ಜೀತಸಿಂಗ್ ಪತ್ತೆ

ಪೊಲೀಸರು ಮತ್ತು ಸೇನೆಯ ಅಧಿಕಾರಿಗಳು ಶ್ರಮವಹಿಸಿ ಸೇನಾ ಅಧಿಕಾರಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ವಸ್ಥ ಸ್ಥಿತಿಯಲ್ಲಿ ಸೇನಾಧಿಕಾರಿ ಕಂಡುಬಂದಿದ್ದಾರೆ. ಖಿನ್ನತೆಗೆ ಒಳಗಾಗಿರುವ ಸುರ್ಜೀತಸಿಂಗ್ ಅವರಿಗೆ ಹಿಂದಿನದ್ದು ಏನೂ ನೆನಪಿಲ್ಲ.‌ ಹೀಗಾಗಿ ಅಲ್ಲಿ, ಇಲ್ಲಿ ಅಲೆದಾಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿದ್ದಾಗ ಪೊಲೀಸರ ಕಣ್ಣಿಗೆ ಬಿದ್ದಿದ್ದು, ವಿಚಾರಣೆ ನಡೆಸಿದಾಗ ಅವರೆಂದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಮಳೆ ಮಧ್ಯೆ ಭೂಕಂಪನ.. ಬೆಚ್ಚಿಬಿದ್ದ ಅಥಣಿ ಜನ

For All Latest Updates

ABOUT THE AUTHOR

...view details