ಕರ್ನಾಟಕ

karnataka

ETV Bharat / state

14 ವರ್ಷದ ಬಾಲಕಿ ಮೇಲೆ 46 ವರ್ಷದ ಸಂಬಂಧಿಕನಿಂದಲೇ ರೇಪ್​ - ಹುಕ್ಕೇರಿ ಬಾಲಕಿ ಮೇಲೆ ಅತ್ಯಾಚಾರ

ಅಪ್ರಾಪ್ತೆಯ ಮೇಲೆ ಆಕೆಯ ಸಂಬಂಧಿಕನೇ ನೀಚ ಕೃತ್ಯ ಎಸಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ..

ಅತ್ಯಾಚಾರ ಆರೋಪಿ
ಅತ್ಯಾಚಾರ ಆರೋಪಿ

By

Published : Jun 13, 2021, 6:59 PM IST

ಚಿಕ್ಕೋಡಿ :14 ವರ್ಷದ ಬಾಲಕಿ ಮೇಲೆ 46 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿರುವ ಆರೋಪ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಕೇಳಿ ಬಂದಿದೆ. ಮಾರುತಿ ಪೂಜೇರಿ (46) ಅತ್ಯಾಚಾರ ಎಸಗಿದ ಆರೋಪಿ. ಈತ ಬಾಲಕಿಯ ಸಂಬಂಧಿ ಎನ್ನಲಾಗಿದೆ. ಬಾಲಕಿ ಬೆಳಗ್ಗೆ ಬಹಿರ್ದೆಸೆಗೆ ತೆರಳಿದಾಗ ಆರೋಪಿ ಈ ಕೃತ್ಯ ಎಸಗಿದ್ದಾನೆ.

ಬಾಲಕಿಯನ್ನು ಗದ್ದೆಗೆ ಕರೆದೊಯ್ದು, ಅವಳ ಬಾಯಿಗೆ ಬಟ್ಟೆ ಕಟ್ಟಿ ನೀಚ ಕೃತ್ಯ ಎಸಗಿದ್ಡಿದಾನೆ ಎಂದು ಆರೋಪಿಸಲಾಗಿದೆ. ಘಟನೆ ಬಳಿಕ ಬಾಲಕಿ ಹೆದರಿ ವಿಷ ಸೇವನೆ ಮಾಡಿದ್ದು, ಸದ್ಯ ಬೆಳಗಾವಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ABOUT THE AUTHOR

...view details