ಅಥಣಿ: ಮಹೇಶ್ ಕುಮಟಳ್ಳಿ ಸಚಿವ ಸಂಪುಟದಲ್ಲಿ ಸ್ಥಾನಮಾನ ಸಿಗದಿರುವುದಕ್ಕೆ ಅಥಣಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರದ ರಚನೆ ಆಗೋದಕ್ಕೆ ಮಹೇಶ್ ಕುಮಟಳ್ಳಿ ಕೂಡ ಕಾರಣಕರ್ತರು. ಆದರೆ, ಯಡಿಯೂರಪ್ಪ ಅಥಣಿ ಶಾಸಕರನ್ನು ಕಡೆಗಣಿದ್ದಾರೆ ಎಂದು ಕುಮಟಳ್ಳಿ ಸಹೋದರ ಡಾ. ಪ್ರಕಾಶ್ ಕುಮಟಳ್ಳಿ ಬೇಸರ ವ್ಯಕ್ತಪಡಿಸಿದರು.
ಮಹೇಶ್ ಕುಮಟಳ್ಳಿ ಅವರನ್ನು ಸಚಿವ ಮಾಡುತ್ತೇನೆಂದು ಸಿಎಂ ಮಾತು ನೀಡಿದ್ದರು. ಆದರೆ, ಇಂದು ವಚನ ಭ್ರಷ್ಟರಾಗಿದ್ದಾರೆ. ನಾವು ಮೊದಲು ಸಚಿವ ಸ್ಥಾನ ನೀಡಿ ಎಂದು ಕೇಳಿರಲಿಲ್ಲ. ಅವರಾಗೆ ನಿಮ್ಮನ್ನು ಸಚಿವನನ್ನಾಗಿ ಮಾಡುತ್ತೆವೆ ಎಂದು ಹೇಳಿದ್ದರು. ಈ ಕಾರಣಕ್ಕಾಗಿಯೇ ಕುಮಟಳ್ಳಿಯವರನ್ನು 40 ಸಾವಿರ ಅಧಿಕ ಮತಗಳಿಂದ ಆಯ್ಕೆ ಮಾಡಿದ್ದಾರೆ.
ರೈತ ಮುಖಂಡ ರಾಜಕುಮಾರ್ ಜಂಬಗಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪ ಚುನಾವಣೆ ವೇಳೆ ಸಿಎಂ ಯಡಿಯೂರಪ್ಪನವರೇ ಅಥಣಿಗೆ ಖುದ್ದಾಗಿ ಬಂದು ಬಹಿರಂಗ ಪ್ರಚಾರದ ಸಮಯದಲ್ಲಿ ಮಹೇಶ್ ಕುಮಟಳ್ಳಿಯನ್ನು ಸಿಎಂ ಮಾಡುತ್ತೇವೆ ಎಂದು ಹೇಳಿದ್ದರು. ಈಗ ವಚನ ಭ್ರಷ್ಟರಾಗಿದ್ದಾರೆ ಎಂದು ಕಿಡಿಕಾರಿದರು.
ಮಹೇಶ್ ಕುಮಟಳ್ಳಿಗೆ ಸಿಗದ ಸಚಿವ ಸ್ಥಾನ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನಿಡುತ್ತಾರೆ ಎಂಬುದು ನಮಗೆ ಖುಷಿ ಕೊಡುವ ವಿಚಾರ ಆಗಿತ್ತು . ಅಥಣಿ ಮತಕ್ಷೇತ್ರದ ಅಭಿವೃದ್ಧಿ ಕನಸು ಕಂಡಿದ್ದೆವು. ಆದರೆ, ಮಹೇಶ್ ಕುಮಠಳ್ಳಿ ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಮಹೇಶ್ ಕುಮಟಳ್ಳಿ ಮೋಸ ಮಾಡಿದ್ದರು. ಅದೇ ರೀತಿ ಬಿಜೆಪಿ ಈಗ ಅವ್ರಿಗೆ ಮೋಸ ಮಾಡಿದೆ ಎಂದರು.