ಬೆಳಗಾವಿ :ಬೊಮ್ಮಾಯಿ ಸರ್ಕಾರ ಪೂರ್ಣಾವಧಿ ಮಾಡಲಿದೆ. ಅವರ ನೇತೃತ್ವದಲ್ಲಿ ಮುಂದಿನ ಐದು ವರ್ಷವೂ ನಾವೇ ಅಧಿಕಾರ ನಡೆಸುತ್ತೇವೆ ಎಂದು ಅರಣ್ಯ ಮತ್ತು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವು 58 ವಾರ್ಡ್‌ಗಳಲ್ಲಿ ಗೆದ್ದೇ ಗೆಲ್ತೇವೆ.
100 ಪರ್ಸೆಂಟ್ ಒಳ್ಳೆಯ ರಿಸಲ್ಟ್ ಕೊಡ್ತೇವೆ. ನಮ್ಮ ಅಭ್ಯರ್ಥಿಗಳು ಜನಸೇವೆ ಮೂಲಕ ರಾಜಕಾರಣಕ್ಕೆ ಬಂದವರು. ನಾವು ಮೇಲಿಂದ ಬಂದವರಲ್ಲ. ಕೆಳಗಿನಿಂದ ಬಂದವರು ಎಂದರು.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು. ಇವತ್ತಿನ ರಾಜಕಾರಣದಲ್ಲಿ ಬಂಡಾಯದ ಬಿಸಿ ಎಲ್ಲರಿಗೂ ಇದೆ. ಕೆಲಸ ಮಾಡುವ ಜನಪ್ರತಿನಿಧಿಗಳನ್ನು ಜನ ಆಯ್ಕೆ ಮಾಡುತ್ತಾರೆ. ಬೆಳಗಾವಿಯ ಜನ ಬುದ್ಧಿವಂತರು. ಲೋಕಸಭೆ ಉಪಚುನಾವಣೆಯಲ್ಲಿ ಮಂಗಲ ಅಂಗಡಿಯನ್ನು ಗೆಲ್ಲಿಸಿದ್ದಾರೆ. ಮಹಾನಗರ ಪಾಲಿಕೆ ಗೆದ್ದು ಒಳ್ಳೆಯ ಮೇಯರ್ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.