ಬೆಳಗಾವಿ:ಸಚಿವ ಉಮೇಶ್ ಕತ್ತಿ ಅವರ ಮೃತದೇಹದ ಅಂತಿಮ ಸಂಸ್ಕಾರ ಇಂದು ಸಂಜೆ ಬೆಳಗಾವಿಯ ಬೆಲ್ಲದ ಬಾಗೇವಾಡಿಯಲ್ಲಿ ನೆರವೇರಲಿದೆ. ಇದಕ್ಕಾಗಿ ಕತ್ತಿ ಮನೆತನದ ತೋಟದ ಜಮೀನಿನಲ್ಲಿ ಸಿದ್ಧತೆ ನಡೆಯುತ್ತಿದೆ. ವೀರಶೈವ ಲಿಂಗಾಯತ ವಿಧಿವಿಧಾನಗಳ ಮೂಲಕ, ತಂದೆ ವಿಶ್ವನಾಥ ಕತ್ತಿ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲು ಕುಟುಂಬ ವರ್ಗ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಬೆಳಗಾವಿಗೆ ಹೆಲಿಕಾಪ್ಟರ್ ಮೂಲಕ ಕತ್ತಿ ಮೃತದೇಹ ರವಾನೆಗೆ ಸಿದ್ಧತೆ; ಸಂಜೆ ಲಿಂಗಾಯತ ಪದ್ಧತಿಯಂತೆ ಅಂತ್ಯಕ್ರಿಯೆ - ಈಟಿವಿ ಭಾರತ್ ಕನ್ನಡ
ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ನೇರವಾಗಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಏರ್ಲಿಫ್ಟ್ ಮಾಡಲು ಸಿದ್ಧತೆ ನಡೆಯುತ್ತಿದೆ.
ತಂದೆ ಸಮಾಧಿ ಪಕ್ಕದಲ್ಲೇ ಅಂತಿ ಸಂಸ್ಕಾರ
ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಿಂದ ನೇರವಾಗಿ ಹೆಚ್ಎಎಲ್ಗೆ ಪಾರ್ಥಿವ ಶರೀರವನ್ನು ತೆಗೆದು ಕೊಂಡು ಹೋಗಿದ್ದು, ಹೆಲಿಕಾಪ್ಟರ್‌ನಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಏರ್ಲಿಫ್ಟ್ ಮಾಡುವ ಕೆಲಸ ನಡೆಯುತ್ತಿದೆ. ಬೆಳಗಾವಿಯಿಂದ ನೇರವಾಗಿ ಸ್ವಗ್ರಾಮಕ್ಕೆ ಮೃತದೇಹದ ರವಾನೆ ಕಾರ್ಯ ನಡೆಯಲಿದೆ. ವಿಶ್ವರಾಜ್ ಸಕ್ಕರೆ ಕಾರ್ಖಾನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಇದನ್ನೂ ಓದಿ :Umesh Katti| ಹುಟ್ಟೂರು ಬೆಲ್ಲದ ಬಾಗೇವಾಡಿಯಲ್ಲಿ ಸಂಜೆ ಉಮೇಶ್ ಕತ್ತಿ ಅಂತ್ಯಸಂಸ್ಕಾರ
Last Updated : Sep 7, 2022, 8:34 AM IST