ಕರ್ನಾಟಕ

karnataka

ETV Bharat / state

ಅಲ್ಲೇ ಸಿದ್ದರಾಮಯ್ಯ ಮನೆಯಲ್ಲೇ ಶವ ಹೂಳಲಿ.. ಅವನ್ಯಾರು ಡಿಕೆಶಿ ನನ್ನ ರಾಜೀನಾಮೆ ಕೇಳೋಕೆ.. ಕತ್ತಿ ಕಿಡಿ

ಕಾಂಗ್ರೆಸ್ ಅಧ್ಯಕ್ಷ ಇದ್ದುಕೊಂಡು ನನ್ನ ರಾಜೀನಾಮೆ ಕೇಳೋದಕ್ಕೆ ಅವನಿಗೇನು ಅಧಿಕಾರವಿದೆ. ಶವಯಾತ್ರೆ ಮಾಡೊದಾದ್ರೆ ಕಾಂಗ್ರೆಸ್​ನ ಶವಯಾತ್ರೆಯನ್ನು ತೆಗೆದುಕೊಂಡು ವಿಪಕ್ಷ ನಾಯಕ ಸಿದ್ದರಾಮಯ್ಯ‌ ಮನೆಗೆ ಹೋಗಲಿ. ಶವಯಾತ್ರೆ ಮಾಡಲಿ, ಅಲ್ಲೇ ಸಿದ್ದರಾಮಯ್ಯ ಮನೆಯಲ್ಲೇ ಶವ ಹೂಳಲಿ..

ಉಮೇಶ್​ ಕತ್ತಿ
ಉಮೇಶ್​ ಕತ್ತಿ

By

Published : Apr 28, 2021, 6:26 PM IST

Updated : Apr 28, 2021, 8:35 PM IST

ಬೆಳಗಾವಿ :ರಾಜ್ಯದ ಫಲಾನುಭವಿಗಳಿಗೆ ಹಾಗೂ ರೈತರಿಗೆ ನನ್ನ ಮಾತಿನಿಂದ ಏನಾದರೂ ಮನಸ್ಸು ನೋಯಿಸಿದ್ರೆ ಸ್ವತಃ ಕ್ಷಮೆ ಕೇಳುತ್ತಿದ್ದೇನೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಿಂದ ಆಹಾರ ಖಾತೆ ಯೋಜನೆಯಡಿ ಎಲ್ಲರಿಗೂ ಪಡಿತರ ವಿತರಣೆ ಜೊತೆಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಗ್ರಾಹಕರಿಗೂ ಹಾಗೂ ರೈತರು ಒಳ್ಳೆಯದು ಆಗಲಿದೆ‌ ಎಂದರು.

ರೈತನೊಂದಿಗೆ ಮಾತನಾಡಿರುವ ವಿಚಾರಕ್ಕೆ, ರಾಜ್ಯದ ಫಲಾನುಭವಿಗಳಿಗೆ ಹಾಗೂ ರೈತರಿಗೆ ಏನಾದರೂ ಮನಸ್ಸು ನೋಯಿಸಿದ್ರೆ ರೈತರು ಹಾಗೂ ಫಲಾನುಭವಿಗಳನ್ನು ಸ್ವತಃ ಕ್ಷಮೆ ಕೇಳುತ್ತಿದ್ದೇನೆ. ನಾನು ರಾಜ್ಯದ ಜನರಿಗೆ ತೊಂದರೆ ಮಾಡಲು ಹೊರಟ್ಟಿಲ್ಲ.

ಉಮೇಶ್ ಕತ್ತಿ

ರಾಜ್ಯದ ಜನರು ಪೌಷ್ಟಿಕ ಆಹಾರ ಉಪಯೋಗಿಸಬೇಕೆಂಬ ಉದ್ದೇಶದಿಂದ ಆಹಾರ ಇಲಾಖೆಯನ್ನು ನಡೆಸುತ್ತಿದ್ದೇನೆ‌. ಇದರಲ್ಲಿ ಯಾರೇ ಅಡ್ಡ ಬಂದ್ರು ನಿಲ್ಲಿಸಲು ಸಾಧ್ಯವಿಲ್ಲ, ಮುಂದುವರೆಯುತ್ತದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರಾಜೀನಾಮೆ ಕೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಏಕವಚನದಲ್ಲೇ ಡಿಕೆಶಿ ವಿರುದ್ಧ ಹರಿಹಾಯ್ದರು. ಅವನ್ಯಾರು ನನ್ನ ರಾಜೀನಾಮೆ ಕೇಳಲಿಕ್ಕೆ, ಹೋಗುವ ಹಾದಿಮೇಲೆ ನಿಂತುಕೊಂಡು ರಾಜೀನಾಮೆ ಕೇಳೋದಕ್ಕೆ ಅವನ್ಯಾರು.

ಕಾಂಗ್ರೆಸ್ ಅಧ್ಯಕ್ಷ ಇದ್ದುಕೊಂಡು ನನ್ನ ರಾಜೀನಾಮೆ ಕೇಳೋದಕ್ಕೆ ಅವನಿಗೇನು ಅಧಿಕಾರವಿದೆ. ಶವಯಾತ್ರೆ ಮಾಡೊದಾದ್ರೆ ಕಾಂಗ್ರೆಸ್​ನ ಶವಯಾತ್ರೆಯನ್ನು ತೆಗೆದುಕೊಂಡು ವಿಪಕ್ಷ ನಾಯಕ ಸಿದ್ದರಾಮಯ್ಯ‌ ಮನೆಗೆ ಹೋಗಲಿ. ಶವಯಾತ್ರೆ ಮಾಡಲಿ, ಅಲ್ಲೇ ಸಿದ್ದರಾಮಯ್ಯ ಮನೆಯಲ್ಲೇ ಶವ ಹೂಳಲಿ ಎಂದು ಆಕ್ರೋಶ ಹೊರ ಹಾಕಿದರು.

ಇದನ್ನು ಓದಿ:ಅಕ್ಕಿ ಹೆಸರಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡ್ತಿದ್ದಾರೆ : ಸಚಿವ ಉಮೇಶ್ ಕತ್ತಿ ಆಕ್ರೋಶ

ಇದನ್ನು ಓದಿ:ಸಿಎಂ ಬಿಎಸ್​ವೈ ಇಂದು ಸಂಜೆಯೊಳಗೆ ಕತ್ತಿ ರಾಜೀನಾಮೆ ಪಡೆದುಕೊಳ್ಳಬೇಕು: ಡಿಕೆಶಿ ಒತ್ತಾಯ

Last Updated : Apr 28, 2021, 8:35 PM IST

ABOUT THE AUTHOR

...view details