ಬೆಳಗಾವಿ :ಹಿಂದಿನಕ್ಕಿಂತಲೂ ಈ ಬಾರಿ ಅತಿ ಹೆಚ್ಚು ಮತಗಳಿಂದ ಮಂಗಳಾ ಅಂಗಡಿ ಉಪ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.
ಬೈ ಎಲೆಕ್ಷನ್ ಕುರಿತಂತೆ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯೆ.. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಕಡೆಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ನಾವೆಲ್ಲಾ ಖುಷಿಯಿಂದ ಪಕ್ಷದ ಕಾರ್ಯಕರ್ತರಾಗಿ ಒಳ್ಳೆಯ ಕೆಲಸ ಮಾಡಿ ಬಿಜೆಪಿ ಗೆಲ್ಲಿಸುವ ಕೆಲಸ ಮಾಡುತ್ತಿದ್ದೇವೆ.
ಬೆಳಗಾವಿ ಜನತೆ ದಿ.ಸುರೇಶ್ ಅಂಗಡಿ ಅವರಿಗೆ ಆಶೀರ್ವಾದ ಮಾಡಿದಂತೆ ಮಂಗಳಾ ಅಂಗಡಿ ಅವರಿಗೂ ಕೂಡ ಆಶೀರ್ವಾದ ಮಾಡಲಿದ್ದಾರೆ ಎಂದರು. ಹಿಂದಿನಕ್ಕಿಂತಲೂ ಈ ಬಾರಿ ಅತಿ ಹೆಚ್ಚು ಮತಗಳಿಂದ ಮಂಗಳಾ ಅಂಗಡಿ ಗೆಲುವು ಸಾಧಿಸಲಿದ್ದಾರೆ. ಗೆದ್ದ ನಂತರ ಒಳ್ಳೆಯ ಕೆಲಸಗಳನ್ನ ಮುಂದಿನ ದಿನಗಳಲ್ಲಿ ಮಂಗಳಾ ಅಂಗಡಿ ಮಾಡುತ್ತಾರೆ ಎಂದರು.
ಇದೇ ವೇಳೆ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣಕ್ಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿಡಿ ಪ್ರಕರಣದ ಕುರಿತು ನೋ ಕಮೆಂಟ್, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತೆರಳಿದರು.
ಇದನ್ನೂ ಓದಿ:ಎಲ್ಲಾ ಉಪಚುನಾಣೆಯಲ್ಲೂ ಗೆಲುವು ನಮ್ಮದೇ: ಲಕ್ಷ್ಮಣ್ ಸವದಿ