ಬೆಳಗಾವಿ :ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು ತಕ್ಷಣವೇ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮನವಿ ಮಾಡಿದರು.
ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದವರು ವೈದ್ಯಕೀಯ ತಪಾಸಣೆಗೆ ಹೆದರಿಕೆ.. ಸುರೇಶ್ ಅಂಗಡಿ ಮನವಿ - Central Railway Department State Minister Suresh Angadi
ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ ಜನರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ವೈದ್ಯಕೀಯ ತಪಾಸಣೆಗೆ ಒಳಗಾಗದಿದ್ರೆ ನಿಮ್ಮ ಆರೋಗ್ಯದ ಜತೆಗೆ ಪರಿವಾರ, ಸಮಾಜದ ಆರೋಗ್ಯ ಕೂಡ ಹಾಳಾಗುತ್ತದೆ. ವೈದ್ಯಕೀಯ ತಪಾಸಣೆಗೆ ಒಳಗಾಗಲು ಅನೇಕರು ಹೆದರಿದ್ದಾರೆ ಎಂಬ ಮಾಹಿತಿ ಬಂದಿದೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಯಾರಾದರೂ ಹೊಡೆಯುತ್ತಾರೆ, ತೊಂದರೆ ಕೊಡುತ್ತಾರೆ ಎಂಬ ಭಯದಲ್ಲಿ ಅನೇಕರಿದ್ದಾರೆ. ನಿಮ್ಮನ್ನು ಯಾರೂ ಹೊಡೆಯಲ್ಲ, ಯಾರಿಂದಲೂ ನಿಮಗೆ ತೊಂದರೆ ಆಗಲ್ಲ. ಯಾರಾದರೂ ಹೊಡೆಯುತ್ತಾರೆ ಎಂಬ ಭಯವಿದ್ರೆ ಅದರಿಂದ ಹೊರಬನ್ನಿ ಎಂದರು.
ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ ಜನರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ವೈದ್ಯಕೀಯ ತಪಾಸಣೆಗೆ ಒಳಗಾಗದಿದ್ರೆ ನಿಮ್ಮ ಆರೋಗ್ಯದ ಜತೆಗೆ ಪರಿವಾರ, ಸಮಾಜದ ಆರೋಗ್ಯ ಕೂಡ ಹಾಳಾಗುತ್ತದೆ. ವೈದ್ಯಕೀಯ ತಪಾಸಣೆಗೆ ಒಳಗಾಗಲು ಅನೇಕರು ಹೆದರಿದ್ದಾರೆ ಎಂಬ ಮಾಹಿತಿ ಬಂದಿದೆ. ಕೊರೊನಾ ನಿಯಂತ್ರಣಕ್ಕೆ ಧರ್ಮಸಭೆಯಲ್ಲಿ ಪಾಲ್ಗೊಂಡವರು ಪೊಲೀಸರಿಗೆ ಸಹಕರಿಸಬೇಕು ಎಂದು ಕೋರಿದರು.