ಕರ್ನಾಟಕ

karnataka

ETV Bharat / state

ಹೊಸ ಆರ್​ಟಿಓ ಕಚೇರಿ ಆರಂಭಿಸುವ ಪ್ರಸ್ತಾವನೆ ಇಲ್ಲ : ಸಚಿವ ಶ್ರೀರಾಮುಲು

ಸಾರಿಗೆ ಇಲಾಖೆಯ 30 ಸೇವೆಗಳನ್ನು ಆನ್​​ಲೈನ್ ಸೇವೆಗಳನ್ನಾಗಿ ಪರಿವರ್ತಿಸಲಾಗಿದೆ. ಹಾಗಾಗಿ, ಸಾರ್ವಜನಿಕರ ಕಚೇರಿಗೆ ಭೇಟಿ ನೀಡುವ ಅಗತ್ಯ ಇರುವುದಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ವಿಧಾನಸಭೆಯಲ್ಲಿ ಇಂದು ತಿಳಿಸಿದರು.

Minister Sriramulu Reaction
Minister Sriramulu Reaction

By

Published : Dec 21, 2022, 3:59 PM IST

Updated : Dec 21, 2022, 5:43 PM IST

ವಿಧಾನಸಭೆ ಅಧಿವೇಶನ

ಬೆಳಗಾವಿ/ಬೆಂಗಳೂರು :ಸಾರಿಗೆ ಇಲಾಖೆಯಲ್ಲಿ ಹೊಸದಾಗಿ ಆರ್​ಟಿಓ ಕಚೇರಿಗಳನ್ನು ಆರಂಭಿಸುವ ಪ್ರಸ್ತಾವನೆ ಇಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ವಿಧಾನಸಭೆಯಲ್ಲಿ ಇಂದು ತಿಳಿಸಿದರು.

ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಸುಕುಮಾರಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇನ್ನು ಮುಂದೆ ಆರ್​ಟಿಓ ಕಚೇರಿ ತೆರೆಯುವುದಿಲ್ಲ. ಸಾರಿಗೆ ಇಲಾಖೆಯಲ್ಲಿ ಹಲವು ಸೇವೆಗಳನ್ನು ಆನ್​​ಲೈನ್ ಸೇವೆಗಳನ್ನಾಗಿ ಮಾಡಲಾಗಿದೆ. ಇದರ ಜೊತೆಗೆ ಗ್ರಾಮ ಒನ್ ಹಾಗೂ ಜನಸೇವಕ ಯೋಜನೆಗಳಿಂದಲೂ ಸಾರಿಗೆ ಇಲಾಖೆಯ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸಲಾಗುತ್ತಿದೆ. ಹಾಗಾಗಿ, ಪ್ರಸ್ತುತ ಯಾವುದೇ ಹೊಸ ಕಚೇರಿಗಳನ್ನು ಆರಂಭಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದರು.

ಕುಂದಾಪುರದಲ್ಲಿ ಆರ್​ಟಿಓ ಕಚೇರಿ ಆರಂಭಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಸಾರಿಗೆ ಇಲಾಖೆಯ 30 ಸೇವೆಗಳನ್ನು ಆನ್​​ಲೈನ್ ಸೇವೆಗಳನ್ನಾಗಿ ಪರಿವರ್ತಿಸಲಾಗಿದೆ. ಹಾಗಾಗಿ, ಸಾರ್ವಜನಿಕರ ಕಚೇರಿಗೆ ಭೇಟಿ ನೀಡುವ ಅಗತ್ಯ ಇರುವುದಿಲ್ಲ. ಇದನ್ನೆಲ್ಲ ಮನಗಂಡು ಹೊಸ ಸಾರಿಗೆ ಕಚೇರಿಗಳನ್ನು ಆರಂಭಿಸುತ್ತಿಲ್ಲ ಎಂದು ಸದನಕ್ಕೆ ತಿಳಿಸಿದರು.

ಇದನ್ನೂ ಓದಿ:ಸಭಾಪತಿ ಸ್ಥಾನದ ಮೇಲೆ ನಾವೂ ಕಣ್ಣು ಹಾಕಿದವರೇ, ಆದರೆ ಯೋಗ ಬೇಕಲ್ಲ: ಆಯನೂರು ಮಂಜುನಾಥ್

Last Updated : Dec 21, 2022, 5:43 PM IST

ABOUT THE AUTHOR

...view details