ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಎಂಇಎಸ್ ನಿಷೇಧಕ್ಕೆ ಆಗ್ರಹಿಸುವೆ: ಉದ್ಧವ್ ಠಾಕ್ರೆಗೆ ಶ್ರೀಮಂತ ಪಾಟೀಲ್​ ಠಕ್ಕರ್ - maharashtra karnataka border controversial book

ಮಹಾರಾಷ್ಟ್ರ ಮುಖ್ಯಮಂತ್ರಿ ವಿವಾದಿತ ಪುಸ್ತಕ ಬಿಡುಗಡೆ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಶ್ರೀಮಂತ ಪಾಟೀಲ್​ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಸಿಎಂ ಯಡಿಯೂರಪ್ಪಗೆ ಒತ್ತಾಯಿಸುವುದಾಗಿ ಹೇಳಿದ್ದಾರೆ.

minister srimantha patil orders for  ban MES
ಉದ್ಧವ್ ಠಾಕ್ರೆಗೆ ಶ್ರೀಮಂತ ಪಾಟೀಲ ಠಕ್ಕರ್

By

Published : Jan 27, 2021, 3:31 PM IST

ಬೆಳಗಾವಿ:ಎಂಇಎಸ್​ನಿಂದ ನಾಡದ್ರೋಹಿ ಚಟುವಟಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಎಂಇಎಸ್ ನಿಷೇಧಿಸುವಂತೆ ಮುಖ್ಯಮಂತ್ರಿಗೆ ಆಗ್ರಹಿಸುವೆ ಎಂದು ಎಂದು ಜವಳಿ ಸಚಿವ ಶ್ರೀಮಂತ ಪಾಟೀಲ್​ ಹೇಳಿದರು.

ಮಹಾರಾಷ್ಟ್ರ ಸಿಎಂಗೆ ಎಚ್ಚರಿಕೆ ರವಾನಿಸಿದ ಸಚಿವ ಶ್ರೀಮಂತ ಪಾಟೀಲ್​ ಪ್ರತಿಕ್ರಿಯೆ

ಗಡಿಯ ವಿಚಾರವಾಗಿ ಪ್ರಚೋದನಕಾರಿ ಭಾಷಣ ಮಾಡಿದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಠಕ್ಕರ್ ಕೊಟ್ಟ ಸಚಿವ ಶ್ರೀಮಂತ ಪಾಟೀಲ, ಎಂಇಎಸ್ ಉದ್ಧಟತನ ಹೆಚ್ಚುತ್ತಿದೆ. ಈ ಕಾರಣಕ್ಕೆ ಎಂಇಎಸ್ ನಿಷೇಧಿಸುವಂತೆ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪರನನ್ನು ಒತ್ತಾಯಿಸುತ್ತೇನೆ ಎಂದರು.

ಮಹಾರಾಷ್ಟ್ರ ಮುಖ್ಯಮಂತ್ರಿ ವಿವಾದಿತ ಪುಸ್ತಕ ಬಿಡುಗಡೆ ವಿಚಾರಕ್ಕೆ ಸಚಿವ ಶ್ರೀಮಂತ ಪಾಟೀಲ್​ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದರು. ಅವರಿಗೆ ಒಳ್ಳೆಯದನ್ನು ಬರೆಯಲು ಬರಲ್ಲ, ಅದಕ್ಕೆ ಇಂಥ ಕೆಲಸ ಮಾಡ್ತಿದ್ದಾರೆ. ಮಹಾರಾಷ್ಟ್ರ ಸಿಎಂಗೆ ಮಾಡಲು ಕೆಲಸವೇ ಇಲ್ಲ. ಖಾಲಿ ಇರುವ ಉದ್ಧವ್​ ಠಾಕ್ರೆ ಯಾವಾಗಲೂ ಗಡಿ ವಿವಾದದ ಬಗ್ಗೆ ಮಾತನಾಡುತ್ತಿರುತ್ತಾರೆ. ಆಗದ ವಿಷಯ, ವಿಚಾರಗಳ ಬಗ್ಗೆಯೇ ಮಹಾರಾಷ್ಟ್ರ ಸಿಎಂ ಹೆಚ್ಚೆಚ್ಚು ಮಾತನಾಡುವುದು. ಅವರ ಹೇಳಿಕೆ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದು ಬೇಡ. ಬೆಳಗಾವಿ ಯಾವಾಗಲೂ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಸಚಿವ ಶ್ರೀಮಂತ ಪಾಟೀಲ್​ ತಿರುಗೇಟು ನೀಡಿದರು.

ಇದನ್ನೂ ಓದಿ:ಇಂದಲ್ಲ ನಾಳೆ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇವೆ: ಮಹಾ ಸಿಎಂ

ABOUT THE AUTHOR

...view details