ಅಥಣಿ:ಸಾರಿಗೆ ಸಚಿವ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಮುಷ್ಕರನಿರತ ಚಾಲಕ, ನಿರ್ವಾಹಕರಿಗೆ ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡುವ ಮೂಲಕ ಮನವೊಲಿಕೆ ಪ್ರಯತ್ನ ಮಾಡಿದರು.
ಕಳೆದ ಒಂದು ವಾರದಿಂದ ಕೆಲಸಕ್ಕೆ ಗೈರಾಗಿರುವ ಅಥಣಿ ಡಿಪೋದ ಚಾಲಕ ಮತ್ತು ನಿರ್ವಾಹಕರಿಗೆ ಫೋನ್ ಮಾಡಿದ ಚಿದಾನಂದ ಸವದಿ, ಸರ್ಕಾರ ನಿಮ್ಮ ಜೊತೆ ಇದೆ. ದಯವಿಟ್ಟು ಕೆಲಸಕ್ಕೆ ಮರಳಿ ಎಂದು ಮನವಿ ಮಾಡಿದರು. ಚಿದಾನಂದ ಮನವಿಗೆ ಸ್ಪಂದಿಸಿದ ನೂರಕ್ಕೂ ಹೆಚ್ಚು ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಹಾಜರಾದರು.