ಕರ್ನಾಟಕ

karnataka

ETV Bharat / state

'ಅದು ಕೇಂದ್ರಕ್ಕೆ ಬಿಟ್ಟ ವಿಷಯ, ಆ ವಿಚಾರ‌ ಮಾತನಾಡುವಷ್ಟು ದೊಡ್ಡವನಲ್ಲ' - Minister shrimanth patil talks about check post on karnataka and maharastra border

ದಿನ ಬಳಕೆ ಸಾಮಗ್ರಿಗಳ ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ್, 'ಅದು ಕೇಂದ್ರಕ್ಕೆ ಬಿಟ್ಟ ವಿಚಾರ, ಆ ವಿಚಾರವಾಗಿ‌ ಮಾತನಾಡುವಷ್ಟು ದೊಡ್ಡವನಲ್ಲ. ನಾವು ನಮ್ಮ ಇಲಾಖೆ ಕಡೆ ಹೆಚ್ಚಿನ ಗಮನ ಹರಿಸೋಣ' ಎಂದಿದ್ದಾರೆ.

minister-shrimanth-patil-talks-about-check-post-in-karnataka-border
ಸಚಿವ ಶ್ರೀಮಂತ ಪಾಟೀಲ್

By

Published : Feb 26, 2021, 5:59 PM IST

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ಕರ್ನಾಟಕ ಗಡಿ ಭಾಗದಲ್ಲಿ ಚೆಕ್​​ಪೋಸ್ಟ್​ ನಿರ್ಮಾಣ ಮಾಡಲಾಗಿದೆ ಎಂದು ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ್​ ತಿಳಿಸಿದ್ದಾರೆ.

ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ವಿವಿಧ ಕಾಮಗಾರಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸದ್ಯ ಕಾಗವಾಡ - ಮಿರಜ, ಗಣೇಶವಾಡಿ - ಕಾಗವಾಡದಲ್ಲಿ ಚೆಕ್​ಪೋಸ್ಟ್ ನಿರ್ಮಿಸಲಾಗಿದ್ದು, ಇನ್ನು ಹಲವೆಡೆ ನಿರ್ಮಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗುವುದು ಎಂದರು.

ಸಚಿವ ಶ್ರೀಮಂತ ಪಾಟೀಲ್

ತಾಲೂಕಿನ ಬೊರಗಾಂವ್​ನಲ್ಲಿ ಕೆಲ ಟೆಕ್ಸ್​ಟೈಲ್ಸ್​‌ ಮಾಲೀಕರು ತಮ್ಮ ಉದ್ಯಮ ನಡೆಸಲಾಗದೇ ಬೇರಯವರಿಗೆ ಬಾಡಿಗೆ ನೀಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಹಿಂದೆ ನಾನೂ ಬೊರಗಾಂವ್​ಗೆ ಹೋಗಿದ್ದೆ, ಆಗ ಮಾಲೀಕರೆ ಟೆಕ್ಸ್​ಟೈಲ್ಸ್​ ನಡೆಸುತ್ತಿದ್ದರು. ಈ ಬಗ್ಗೆ ನಾನೂ ಕೂಡಾ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು.

ಓದಿ:'ಇಲ್ಲೇ ಹೀಗೆ ವರ್ತಿಸಿದ್ರೆ, ಜನರಿಗೆ ನೀವೇನು ನ್ಯಾಯ ಒದಗಿಸುತ್ತೀರಿ?'

ದಿನ ಬಳಕೆ ಸಾಮಗ್ರಿಗಳ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ಅದು ಕೇಂದ್ರಕ್ಕೆ ಬಿಟ್ಟ ವಿಚಾರ, ಆ ವಿಚಾರವಾಗಿ‌ ಮಾತನಾಡುವಷ್ಟು ದೊಡ್ಡವನಲ್ಲ, ನಾವು ನಮ್ಮ ಇಲಾಖೆ ಕಡೆ ಹೆಚ್ಚಿನ ಗಮನ ಹರಿಸೋಣ ಎಂದರು.

For All Latest Updates

TAGGED:

ABOUT THE AUTHOR

...view details