ಬೆಳಗಾವಿ: ಮಂಡ್ಯದಂತೆ ಬೆಳಗಾವಿ ಕೂಡ ಸಕ್ಕರೆ ನಾಡು. ಹೀಗಾಗಿ ಇಲ್ಲಿನ ಕಬ್ಬು ಬೆಳೆಗಾರರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಭರವಸೆ ನೀಡಿದರು.
ಕಬ್ಬು ಬೆಳೆಗಾರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು: ಶಿವರಾಮ್ ಹೆಬ್ಬಾರ್ - Payment of cane dues
ಬೆಳಗಾವಿ ಜಿಲ್ಲೆಯ ನಾಲ್ಕೈದು ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾರ್ಖಾನೆಗಳು ಕಬ್ಬಿನ ಬಾಕಿ ಹಣ ಪಾವತಿ ಮಾಡಿದ್ದರಿಂದ ಸಕ್ಕರೆ ಕಾರ್ಖಾನೆಗಳು ಒತ್ತಡದಿಂದ ಮುಕ್ತವಾಗಿವೆ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ಶಿವರಾಮ್ ಹೆಬ್ಬಾರ್
ಸೌಲಭ್ಯ ಒದಗಿಸಲು ಬಿಎಸ್ವೈ ಸರ್ಕಾರ ಬದ್ಧ: ರಾಜ್ಯದ 64 ಕಾರ್ಖಾನೆಗಳಿಂದ 70 ಸಾವಿರ ಕೋಟಿ ಸಕ್ಕರೆ ನುರಿಸಲಾಗಿದ್ದು, 71.800 ಕೋಟಿ ರೂ.ಗಳನ್ನು ರೈತರಿಗೆ ನೀಡಲಾಗಿದೆ. ಅದರಲ್ಲಿ ಶುಗರ್ ಕಾರ್ಖಾನೆ ಮಾಲೀಕರಿಂದ ಕೇವಲ 600 ಕೋಟಿ ರೂ.ಗಳು ಮಾತ್ರ ಬಾಕಿ ಉಳಿದಿದ್ದು, ಜಿಲ್ಲೆಯ ನಾಲ್ಕೈದು ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾರ್ಖಾನೆಗಳು ಕಬ್ಬಿನ ಬಾಕಿ ಹಣ ಪಾವತಿ ಮಾಡಿದ್ದರಿಂದ ಸಕ್ಕರೆ ಕಾರ್ಖಾನೆಗಳು ಒತ್ತಡದಿಂದ ಮುಕ್ತವಾಗಿವೆ. ಕಾರ್ಮಿಕರು ಹಾಗೂ ಕೃಷಿಗರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಯಡಿಯೂರಪ್ಪ ಸರ್ಕಾರ ಬದ್ಧವಿದೆ ಎಂದರು.