ಕರ್ನಾಟಕ

karnataka

ETV Bharat / state

ಸಾರಿಗೆ ಸಂಸ್ಥೆಯ ಬಸ್ ಆ್ಯಂಬುಲೆನ್ಸ್ ಉದ್ಘಾಟಿಸಿದ ಸಚಿವ ಸವದಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ನಿರ್ಮಿಸಿರುವ ಐಸಿಯು ಆನ್ ವಿಲ್ಸ್ ಬಸ್ ಅನ್ನು ಇಂದು ಅಥಣಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಡಿಸಿಎಂ ಸವದಿ ಹಸ್ತಾಂತರಿಸಿದರು.

ಸಚಿವ ಸವದಿ
ಸಚಿವ ಸವದಿ

By

Published : Jun 5, 2021, 7:11 PM IST

Updated : Jun 5, 2021, 7:23 PM IST

ಅಥಣಿ: ಕೊರೊನಾ ಸೋಂಕಿತರ ಚಿಕಿತ್ಸೆಗೆ ನೆರವಾಗುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ಬಸ್‌ ಅನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿ ಅಥಣಿ ಸಮುದಾಯ ಆಸ್ಪತ್ರೆ ಆವರಣದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟನೆ ಮಾಡಿದರು.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ನಿರ್ಮಿಸಿರುವ ಐಸಿಯು ಆನ್ ವಿಲ್ಸ್ ಬಸ್ ಅನ್ನು ಇಂದು ಅಥಣಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಡಿಸಿಎಂ ಸವದಿ ಹಸ್ತಾಂತರಿಸಿದರು.

ಇದೆ ವೇಳೆ ಮಾದ್ಯಮಗಳ ಜೊತೆ ಮಾತನಾಡಿ, ಹಳೆ ಬಸ್​​​ಗಳನ್ನು ಉಪಯೋಗಿಸಿಕೊಂಡು ನಾವು ಆ್ಯಂಬುಲೆನ್ಸ್ ತೈಯಾರಿ ಮಾಡುತಿದ್ದೇವೆ, ಕೆಲವು ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಕ್ಸಿಜನ್ ಇರುವುದಿಲ್ಲ, ಈ ನಿಟ್ಟಿನಲ್ಲಿ ಬಸ್ ಆ್ಯಂಬುಲೆನ್ಸ್ ಉಪಯೋಗವಾಗುತ್ತದೆ. ತುರ್ತು ಸಂದರ್ಭದಲ್ಲಿ ಅತಿ ಉತ್ತಮವಾದ ಸೇವೆ ಇದಾಗಿರುತ್ತದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.

ನಮ್ಮ ದೇಶದಲ್ಲಿ ವ್ಯಾಕ್ಸಿನ್ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗಿತ್ತು, ಕೆಲವರ ಅಪ ಪ್ರಚಾರದಿಂದ ದೇಶದ ಜನತೆ ವ್ಯಾಕ್ಸಿನ್ ಪಡೆಯಲು ಮುಂದೆ ಬರದಿದ್ದರಿಂದ ವ್ಯಾಕ್ಸಿನ್ ಹಾಳಾಗಬಾರದೆಂದು ಮತ್ತು ವಿದೇಶದಲ್ಲಿ ಬೇಡಿಕೆ ಇರುವುದರಿಂದ ರಪ್ತು ಮಾಡಲಾಯಿತು. ಸದ್ಯದಲ್ಲೇ ವ್ಯಾಕ್ಸಿನ್ ಕೊರತೆ ನೀಗಿಸಲಾಗುವುದು ಎಂದು ಭರವಸೆ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಲಕ್ಷ್ಮಣ ಸವದಿ

ಕಪ್ಪು ಶೀಲಿಂದ್ರ ರೋಗದ ಔಷಧ ವಿದೇಶಗಳಿಂದ ಆಮದು ಆಗುವುದರಿಂದ ಸ್ವಲ್ಪ ತೊಂದರೆ ಉಂಟಾಗಿದೆ. ರಾಜ್ಯದಲ್ಲಿ 1,600ಕ್ಕೂ ಹೆಚ್ಚು ಬ್ಲಾಕ್ ಫಂಗಸ್ ಪ್ರಕರಣಗಳು ಕಾಣಿಸಿಕೊಂಡಿವೆ. ಈ ರೋಗಕ್ಕೆ ರಾಜ್ಯ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಮಾಜಿಕ ಅಂತರವೇ ಕೊರೊನಾಗೆ ಮದ್ದು ಎಂದು ತಿಳಿಸಿದರು.

ಅಥಣಿ ತಾಲೂಕಿನಲ್ಲಿ ಎರಡು ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತದೆ, ಒಂದು ಸರ್ಕಾರದಿಂದ ಹಾಗೂ ನಮ್ಮ ಸ್ನೇಹಿತರು ಕೊಡುಗೆಯಾಗಿ ಒಂದು. ಇದರಿಂದ ಸುತ್ತಮುತ್ತಲಿನ ತಾಲೂಕುಗಳಿಗೆ ಆಕ್ಸಿಜನ್ ಕೊರತೆ ತಪ್ಪಿಸಲು ಸಾಧ್ಯವಾಗುತ್ತದೆ. ಅಥಣಿಗೆ ನಾಲ್ಕು ಮೊಬೈಲ್ ಸಂಚಾರಿ ಆಸ್ಪತ್ರೆ ಬಸ್ ನೀಡಲಾಗುವುದು ಎಂದು ತಿಳಿಸಿದರು.

Last Updated : Jun 5, 2021, 7:23 PM IST

ABOUT THE AUTHOR

...view details