ಚಿಕ್ಕೋಡಿ : ಸಚಿವೆ ಶಶಕಲಾ ಜೊಲ್ಲೆ ಮನೆಯಲ್ಲಿಯೇ ಕುಟುಂಬದವರ ಜೊತೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಾಡಿದರು.
ಮನೆಯಲ್ಲಿ ಕುಟುಂಬದ ಜೊತೆ ಯೋಗ ದಿನ ಆಚರಿಸಿದ ಸಚಿವೆ ಶಶಿಕಲಾ ಜೊಲ್ಲೆ - ವಿಶ್ವ ಯೋಗ ದಿನ ಸುದ್ದಿ
ಯೋಗ ಶಾಸ್ತ್ರವನ್ನು ಕೊಡುಗೆಯನ್ನಾಗಿ ನೀಡಿದ್ದು ಭಾರತೀಯರು. ನಾವು ಆರೋಗ್ಯ, ನೆಮ್ಮದಿ, ಶಾಂತಿಯಿಂದ ಬದುಕಬೇಕಾದರೆ ಯೋಗಾಸನ ರಾಮಬಾಣ ಎಂದು ಶಶಿಕಲಾ ಜೊಲ್ಲೆ ಹೇಳಿದರು.
ಸಚಿವೆ ಶಶಕಲಾ ಜೊಲ್ಲೆ
ಭಾರತೀಯ ಪರಂಪರೆಯಲ್ಲಿ ಋಷಿ ಮುನಿಗಳು ಯೋಗ ಎನ್ನುವ ದೊಡ್ಡ ಕೊಡುಗೆಯನ್ನು ನಮಗೆ ನೀಡಿದ್ದಾರೆ. 21 ಶತಮಾನದಲ್ಲಿ ಮನುಷ್ಯನಿಗಿರುವ ಒತ್ತಡ, ನೆಮ್ಮದಿ, ಶಾಂತಿ, ಆರೋಗ್ಯ ಸಿಗಬೇಕೆಂದರೆ ಯೋಗ ಮುಖ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಕಲಾ ಜೊಲ್ಲೆ ಹೇಳಿದರು.