ಕರ್ನಾಟಕ

karnataka

ETV Bharat / state

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಚಿವ ರಮೇಶ್ ಜಾರಕಿಹೊಳಿ‌ - Ramesh Zarakiholi, who had just moved to Tirupati

ಇದೀಗ ಕೊರೊನಾ ಅಟ್ಟಹಾಸ ಕ್ಷೀಣವಾಗ್ತಿದೆ. ಕೆಲ ಧಾರ್ಮಿಕ ಕೇಂದ್ರಗಳು ಭಕ್ತರ ದರ್ಶನಕ್ಕೆ ಮತ್ತೆ ತೆರೆದಿವೆ. ಹೀಗಾಗಿ ರಮೇಶ್ ಜಾರಕಿಹೊಳಿ‌ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದರು..

ಜಾರಕಿಹೊಳಿ‌
ಜಾರಕಿಹೊಳಿ‌

By

Published : Dec 15, 2020, 4:47 PM IST

ಬೆಳಗಾವಿ :ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರು ಇಂದು ದಿಢೀರ್ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದರು.

ನಿನ್ನೆಯೇ ಬೆಂಗಳೂರಿನಿಂದ ತಿರುಪತಿಗೆ ತೆರಳಿದ್ದ ರಮೇಶ್ ಜಾರಕಿಹೊಳಿ, ಇಂದು ತಿಮ್ಮಪ್ಪನ ದರ್ಶನ ಪಡೆದರು. ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರು ಸಚಿವರಿಗೆ ಸಾಥ್ ನೀಡಿದ್ದರು. ಇಬ್ಬರು ಸೇರಿ ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಚಿವ ರಮೇಶ್ ಜಾರಕಿಹೊಳಿ‌

ಉಪಚುನಾವಣೆ ಗೆಲುವಿನ ಬಳಿಕ ಹಾಗೂ ತನಗಿಷ್ಟವಾದ ಜಲಸಂಪನ್ಮೂಲ ಖಾತೆ ಸಿಕ್ಕ ಬಳಿಕ ದೇಶಾದ್ಯಂತ ಕೊರೊನಾ ವಕ್ಕರಿಸಿತು. ಹೀಗಾಗಿ ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕರ ಪ್ರವೇಶ ನಿರಾಕರಿಸಲಾಗಿತ್ತು.

ಇದೀಗ ಕೊರೊನಾ ಅಟ್ಟಹಾಸ ಕ್ಷೀಣವಾಗ್ತಿದೆ. ಕೆಲ ಧಾರ್ಮಿಕ ಕೇಂದ್ರಗಳು ಭಕ್ತರ ದರ್ಶನಕ್ಕೆ ಮತ್ತೆ ತೆರೆದಿವೆ. ಹೀಗಾಗಿ ರಮೇಶ್ ಜಾರಕಿಹೊಳಿ‌ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದರು.

ABOUT THE AUTHOR

...view details