ಚಿಕ್ಕೋಡಿ (ಬೆಳಗಾವಿ): ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ಸಂಬಂಧ ಸದ್ಯ ಪೀರನವಾಡಿಯಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಬೆಳಗಾವಿ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ರಾಯಣ್ಣ-ಶಿವಾಜಿ ಇಬ್ಬರೂ ಈ ದೇಶದ ಆಸ್ತಿ: ಸಚಿವ ರಮೇಶ್ ಜಾರಕಿಹೊಳಿ - ಮಹಾರಾಷ್ಟ್ರ ಏಕೀಕರಣ ಸಮಿತಿ
ಗಲಾಟೆಯ ವಿಚಾರವಾಗಿ ಈಗಾಗಲೇ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರ ಜೊತೆಯೂ ಮಾತನಾಡಿದ್ದೇನೆ. ಲಾಠಿ ಚಾರ್ಜ್ ಆಗಿದ್ದು ನಿಜ. ಆದರೆ ಯಾರೂ ಚಪ್ಪಲಿ ಎಸೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಅಂತ ಜಾರಕಿಹೊಳಿ ಹೇಳಿದರು.
ರಾಯಣ್ಣ, ಶಿವಾಜಿ ಇಬ್ಬರೂ ಈ ದೇಶದ ಆಸ್ತಿ: ಸಚಿವ ರಮೇಶ್ ಜಾರಕಿಹೊಳಿ
ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರತಿಕ್ರಿಯಿಸಿದ ಅವರು, ರಾಯಣ್ಣ ಹಾಗೂ ಶಿವಾಜಿ ಇಬ್ಬರೂ ಈ ದೇಶದ ಆಸ್ತಿ. ಅವರನ್ನು ಯಾವ ಜಾತಿಗೂ ಸೀಮಿತ ಮಾಡುವುದಿಲ್ಲ. ಅವರಿಗೆ ಯಾವುದೇ ಅಪಮಾನ ಆಗದ ರೀತಿಯಲ್ಲಿ ಗೊಂದಲ ಪರಿಹರಿಸುತ್ತೇವೆ ಎಂದರು.
ಅಲ್ಲದೆ ಈ ಗಲಾಟೆಯ ವಿಚಾರವಾಗಿ ಈಗಾಗಲೇ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರ ಜೊತೆಯೂ ಮಾತನಾಡಿದ್ದೇನೆ. ಲಾಠಿ ಚಾರ್ಜ್ ಆಗಿದ್ದು ನಿಜ. ಆದರೆ ಯಾರೂ ಚಪ್ಪಲಿ ಎಸೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಅಂತ ಜಾರಕಿಹೊಳಿ ಹೇಳಿದರು.