ಬೆಳಗಾವಿ:ಶಾಸಕ ಉಮೇಶ್ ಕತ್ತಿಯವರು ಶಾಸಕರಿಗೆ ಊಟ ಮಾಡಿಸಿದ್ದಾರೆಯೇ ಹೊರತು ಭಿನ್ನಮತೀಯ ಚಟುವಟಿಕೆ ನಡೆಸಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ ಹಿನ್ನೆಲೆ ಹೋಟೆಲ್ಗಳೆಲ್ಲವೂ ಬಂದ್ ಇದ್ದವು. ಈ ಕಾರಣಕ್ಕೆ ನಮ್ಮ ಭಾಗದ ಶಾಸಕರೆಲ್ಲರೂ ಉಮೇಶ್ ಕತ್ತಿ ನಿವಾಸದಲ್ಲಿ ಊಟ ಮಾಡಿದ್ದಾರೆ. ಊಟ ಮಾಡಿದ್ರೆ ತಪ್ಪೇನು..? ಇದನ್ನೇ ನೀವು ಬಂಡಾಯ ಅಂದ್ರೆ ನಾನೇನು ಮಾಡಲಿ ಎಂದರು.
ಉಮೇಶ್ ಕತ್ತಿ ಬಂಡಾಯ ಎದ್ದಿಲ್ಲ: ಸಚಿವ ರಮೇಶ್ ಜಾರಕಿಹೊಳಿ - ಶಾಸಕ ಉಮೇಶ್ ಕತ್ತಿ
ಬಿಜೆಪಿಯಲ್ಲಿನ ಭಿನ್ನಮತದ ವಿಚಾರವಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದು, ಶಾಸಕ ಉಮೇಶ್ ಕತ್ತಿಯವರು ಶಾಸಕರಿಗೆ ಊಟ ಮಾಡಿಸಿದ್ದಾರೆಯೇ ಹೊರತು ಭಿನ್ನಮತೀಯ ಚಟುವಟಿಕೆ ನಡೆಸಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯ ಅತೃಪ್ತ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮಹಾನ್ ನಾಯಕ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಸಿದ್ದರಾಮಯ್ಯನವರ ಕಣ್ಣುಗಳು ಹಳದಿ ಆಗಿವೆ. ಅದಕ್ಕೆ ಅವರು ಹಾಗೇ ಮಾತನಾಡುತ್ತಿದ್ದಾರೆ ಎಂದರು.
ರಾಜ್ಯಸಭೆ ಟಿಕೆಟ್ ವಿಚಾರವಾಗಿ ನಾನು ನನ್ನ ಅಭಿಪ್ರಾಯವನ್ನು ಹೈಕಮಾಂಡ್ಗೆ ತಿಳಿಸಿದ್ದೇನೆ. ಅದನ್ನು ನಾನು ಬಹಿರಂಗ ಪಡಿಸಲ್ಲ. ಹೈಕಮಾಂಡ್ ಆಯ್ಕೆಗೆ ನಾನು ಬದ್ಧನಾಗಿದ್ದೇನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಚಿಕ್ಕವರಿದ್ದಾಗಿನಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಸಣ್ಣಪುಟ್ಟ ಗೊಂದಲಗಳನ್ನು ನಿವಾರಿಸುವ ಸಾಮರ್ಥ್ಯ ಅವರಿಗಿದೆ ಎಂದರು.