ಕರ್ನಾಟಕ

karnataka

ETV Bharat / state

ಗೋಕಾಕ್​ನ ಬಿಜೆಪಿ ಹಿರಿಯ ನಾಯಕರೊಂದಿಗೆ ಸಚಿವ ರಮೇಶ್​ ಜಾರಕಿಹೊಳಿ ಸಭೆ - Ramesh Jarakiholi meeting With senior BJP leaders

ಗೋಕಾಕ್​ ನಗರದಲ್ಲಿರುವ ಸಚಿವ ರಮೇಶ್​ ಜಾರಕಿಹೊಳಿಯವರ ಕಚೇರಿಯಲ್ಲಿಂದು ಬಿಜೆಪಿ ಹಿರಿಯ ನಾಯಕರ‌ ಸಭೆ ನಡೆಯಿತು. ಸಭೆಯಲ್ಲಿ ಲಾಕ್​ಡೌನ್ ಪರಿಸ್ಥಿತಿಯ ಕುರಿತು‌ ಚರ್ಚಿಸಲಾಯಿತು.

Ramesh Jarakiholi meeting  With senior  BJP leaders
ಬಿಜೆಪಿ ಹಿರಿಯ ನಾಯಕರೊಂದಿಗೆ ಸಚಿವ ರಮೇಶ ಜಾರಕಿಹೊಳಿ ಸಭೆ

By

Published : Apr 28, 2020, 10:20 PM IST

ಬೆಳಗಾವಿ: ಸಚಿವ ರಮೇಶ್​ ಜಾರಕಿಹೊಳಿಯವರ ಅಧ್ಯಕ್ಷತೆಯಲ್ಲಿ ಗೋಕಾಕ್​ ನಗರದಲ್ಲಿರುವ ಅವರ ಕಚೇರಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರೊಂದಿಗೆ ಲಾಕ್​ಡೌನ್ ಪರಿಸ್ಥಿತಿಯ ಕುರಿತು‌ ಸಭೆ ನಡೆಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಮೇಶ್​ ಜಾರಕಿಹೊಳಿ, ಲಾಕ್​ಡೌನ್ ಮುಗಿಯುವವರೆಗೂ ಕೂಲಿ ಕಾರ್ಮಿಕರಿಗೆ, ದಿನಗೂಲಿ ಕೆಲಸಗಾರರಿಗೆ ಮೂರು ಹೊತ್ತು ಊಟ ಒದಗಿಸಬೇಕು ಎಂದರು. ಭಾಜಪ ಕಾರ್ಯಕರ್ತರು ಕೋವಿಡ್-19 ಸೋಂಕು ನಿರ್ಮೂಲನೆ ಮಾಡುವಲ್ಲಿ ತೀವ್ರ ಶ್ರಮ ವಹಿಸುತ್ತಿದ್ದಾರೆ. ಇಡೀ ಗೋಕಾಕ್ ನಗರದ ಜನತೆ ಸರ್ಕಾರದ ಮನವಿಗೆ ಸ್ಪಂದಿಸಿ ಮನೆಯಲ್ಲಿಯೇ ಇದ್ದು, ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದರ ಫಲವಾಗಿಯೇ ಇಂದು ತಾಲೂಕಿನಲ್ಲಿ ಇದುವರೆಗೂ ಯಾವ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿಲ್ಲ. ಹಾಗಂತ ಯಾರೂ ಮೈಮರೆಯದೇ ಮುಂದಿನ‌ ಭವಿಷ್ಯದ ದೃಷ್ಟಿಯಿಂದ ಎಚ್ಚರಿಕೆಯಿಂದ ಇರಬೇಕು ಎಂದರು.

ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ, ಮಾಜಿ ಜಿಲ್ಲಾಧ್ಯಕ್ಷ ಈರಪ್ಪ ಕಡಾಡಿ, ಶಶಿಧರ ದೇಮಶೆಟ್ಟಿ, ಯಲಿಗಾರ್, ಸುಭಾಷ್ ಪಾಟೀಲ್, ಅಂಬಿರಾವ್ ಪಾಟೀಲ ಉಪಸ್ಥಿತರಿದ್ದರು.

ABOUT THE AUTHOR

...view details