ಬೆಳಗಾವಿ: ಕಾಂಗ್ರೆಸ್‌ಗೆ ವೈಲೇಷನ್ ಮಾಡೋದೆ ಒಂದು ಸಂಸ್ಕೃತಿ ಆಗಿಬಿಟ್ಟಿದ್ದು, ಕಾಂಗ್ರೆಸ್ನವರಿಗೆ ಅಷ್ಟೊಂದು ಕಾನೂನು ಜ್ಞಾನವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದರು.
ಕಾಂಗ್ರೆಸ್ ವಿರುದ್ಧ ಸಚಿವ ಆರ್.ಅಶೋಕ್ ವಾಗ್ದಾಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್.ಆರ್. ನಗರದಲ್ಲಿ ಕಾಂಗ್ರೆಸ್ ನಾಯಕರಿಗೆ ಬೂತ್ ಏಜೆಂಟ್‌ರು ಸಿಗುತ್ತಿಲ್ಲ. ಅವರಿಗೆ ಹುಡುಕಲು ಕಷ್ಟ ಆಗುತ್ತಿದೆ. ಕಾರಣ ಈಗಾಗಲೇ ಆರ್.ಆರ್. ನಗರದ 9 ವಾರ್ಡ್‌ಗಳಲ್ಲಿನ ಎಲ್ಲ ಕಾರ್ಪೊರೇಟರ್ ಬಿಜೆಪಿ ಸೇರಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್‌ನ ನಾಯಕರು ಬಿಜೆಪಿ ಸೇರ್ತಿದ್ದಾರೆ. 40 ರಿಂದ 50 ಸಾವಿರ ಮತಗಳ ಲೀಡ್‌ನಲ್ಲಿ ಅಂತರದಲ್ಲಿ ನಾವು ಗೆಲ್ತೇವೆ. ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗುತ್ತೆ. ಬೂತ್ ಏಜೆಂಟರ್ಗೂ ಹುಡುಕಾಡುವ ಪರಿಸ್ಥಿತಿ ಕಾಂಗ್ರೆಸ್‌ಗೆ ಬರುತ್ತೆ ಎಂದು ಅಶೋಕ್ ಭವಿಷ್ಯ ನುಡಿದರು.
ರಾಜರಾಜೇಶ್ವರಿ ನಗರದಲ್ಲಿ ನಾನು ಮೂರು ಬಾರಿ ಎಂಎಲ್‌ಎ ಆಗಿ ಗೆದ್ದಿದ್ದೇನೆ. ಇದೀಗ ಆರ್.ಆರ್. ನಗರ ಉಪಚುನಾವಣೆಗೆ ಬಿಜೆಪಿ ಉಸ್ತುವಾರಿ ನಾನೇ ಇದ್ದೀನಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನವರು ಗೆಲುವು ತಮ್ಮದೇ ಅಂತಿದ್ದಾರೆ. ಸ್ವತಃ ಕಾಂಗ್ರೆಸ್ ಅಧ್ಯಕ್ಷರು ಫೀಲ್ಡ್‌ಗಿಳಿದರೂ ಕಾರ್ಯಕರ್ತರು ಕೈಗೆ ಸಿಗುತ್ತಿಲ್ಲ ಎಂದು ಅಶೋಕ್ ವ್ಯಂಗ್ಯವಾಡಿದ್ರು.
ಆರ್.ಆರ್. ನಗರದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡರ ವಿರುದ್ಧ ಕೇಸ್ ವಿಚಾರ ಸಂಬಂಧ, ಚುನಾವಣಾ ಅಧಿಕಾರಿಗಳು ಕೇಸ್ ಹಾಕಿದ್ದಾರೆ, ಸರ್ಕಾರ ಅಲ್ಲ. ಕಾಂಗ್ರೆಸ್‌ಗೆ ಅಷ್ಟೊಂದು ಕಾನೂನು ಜ್ಞಾನವಿಲ್ಲ. ವೈಲೇಷನ್ ಮಾಡೋದು ಕಾಂಗ್ರೆಸ್ ಸಂಸ್ಕೃತಿನಾ?.ಕೆ ಜಿ ಹಳ್ಳಿ, ಡಿ ಜೆ ಹಳ್ಳಿಯ ಗಲಭೆ ಹಿಂದೆ ಕಾಂಗ್ರೆಸ್ ನಾಯಕ ಹಾಗೂ ಹಿಂದೆ ಮೇಯರ್ ಆಗಿದ್ದವರು ಮಾಡಿಸಿದ್ದಾರೆ ಎಂಬ ವರದಿ ಬಂದಿದೆ. ಕಾಂಗ್ರೆಸ್‌ನವರು ಕಾನೂನು ಉಲ್ಲಂಘನೆ ಮಾಡೋದೇ ದೊಡ್ಡ ಸಾಧನೆ ಅಂತಾ ತಿಳಿದುಕೊಂಡಿದ್ದಾರೆ. ಹೀಗಾಗಿ ಅವರಿಗೆ ಏನೂ ಅರ್ಥ ಆಗುತ್ತಿಲ್ಲ ಎಂದು ಸಚಿವ ಆರ್.ಅಶೋಕ್ ಆರೋಪಿಸಿದರು.