ಬೆಳಗಾವಿ:ಮೈಸೂರು ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣಗಳಂತಹ ಘಟನೆಗಳು ಸಮಾಜದಲ್ಲಿ ಬೇಕಾದಷ್ಟು ಕಡೆ ನಡೆಯುತ್ತಿರುತ್ತವೆ. ಇವು ಸಮಾಜಕ್ಕೆ ಅಗೌರವ ತರುವಂತಹ ಘಟನೆಗಳಾಗಿವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಡಿದ ಅಮಲಿನಲ್ಲಿ ಕಾಮುಕರು ಯುವತಿ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಪೊಲೀಸ್ ವರದಿ ಇದೆ. ಆದರೆ, ಇದು ಸಮಾಜಕ್ಕೆ ಒಳ್ಳೆಯ ಮರ್ಯಾದೆ ತರುವಂತಹ ಘಟನೆ ಅಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಗೃಹ ಸಚಿವ ಅರಗ ಜ್ಞಾನೇಂದ್ರಗೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ಘಟನೆಗಳು ಯಾರದ್ದೇ ಸರ್ಕಾರದಲ್ಲಿ ಆದರೂ ಸಮಾಜ ತಲೆ ತಗ್ಗಿಸಬೇಕು ಹೊರತು ಸರ್ಕಾರವಲ್ಲ. ಇದನ್ನು ರಾಜಕೀಯ ವಿಚಾರವನ್ನಾಗಿ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಯನ್ನು ನಾನು ನೋಡಿಲ್ಲ. ಆ ಹೇಳಿಕೆ ನೋಡಿ ನಾನು ಮಾತನಾಡುತ್ತೇನೆ. ಮೈಸೂರಿಗೆ ಹೋದಾಗ ಶೋಷಣೆಗೆ ಒಳಗಾದ ಯುವತಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತೇನೆ ಎಂದರು.
ಸೆ.15ರೊಳಗೆ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ: