ಬೆಳಗಾವಿ: ರಾಷ್ಟ್ರೀಯ ವಿಚಾರ ಹಾಗೂ ಹಿಂದೂ ಧರ್ಮದ ಬಗ್ಗೆ ಯಾರು ಮಾತಾಡುವವರ ಬಗ್ಗೆ ಲಘುವಾಗಿ ಕಾಂಗ್ರೆಸ್ ನಾಯಕರು ಮಾತನಾಡುವ ಅಭ್ಯಾಸ ಹೊಂದಿದ್ದಾರೆಂದು ಸಚಿವ ಬಿ.ಸಿ ನಾಗೇಶ್, ಕಾಂಗ್ರೆಸ್ ವಿರುದ್ಧ ಗುಡುಗಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಂದಿಗೂ ರಾಷ್ಟ್ರೀಯತೆ ಒಪ್ಪಿಕೊಂಡಿಲ್ಲ. ಬ್ರಿಟಿಷರ ಮೌಂಟ್ ಬ್ಯಾಟನ್ಗೆ ಸಿಗರೇಟ್ ಹಚ್ಚಿದವರು ಯಾರು ಅಂತ ಗೊತ್ತಿದೆ. ರಾಷ್ಟ್ರ ವಿರೋಧಿ ಮಾತುಗಳನ್ನು ಹೇಳುತ್ತಾ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
5 ವರ್ಷ ಕಾಂಗ್ರೆಸ್ ಸರ್ಕಾರ ಇತ್ತು. ಅವರಿಗೆ ನಾವು ಯಾವುದಾದರು ಭಾವಚಿತ್ರ ಹಾಕಲು ಅಡ್ಡಿ ಮಾಡಿದ್ದೇವಾ? ಅವರಿಗೆ ಈ ರೀತಿಯ ಐಕಾನ್ಸ್ಗಳ ಚಿತ್ರ ಹಾಕಿ ಗೊತ್ತಿಲ್ಲ. ಅವರಿಗೆ ಒಂದು ಕುಟುಂಬ ಜೊತೆ ಇದ್ದು, ಒಂದು ಕುಟುಂಬದದಿಂದಲೇ ಈ ದೇಶ ಅನ್ನೋದು ಮಾತ್ರ ಗೊತ್ತು ಎಂದು ಕುಟುಕಿದರು.