ಬೆಳಗಾವಿ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಬೆಳಗಾವಿ ಜಿಲ್ಲೆಯ ಅನೇಕ ತಾಲೂಕುಗಳಿಗೆ ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಭೇಟಿ ನೀಡಿದ್ದು, ಸ್ಥಳೀಯ ಶಾಸಕರು ಮಾತ್ರ ಸಚಿವರ ಜೊತೆ ಪ್ರವಾಸ ಮಾಡಲು ನಿರಾಸಕ್ತಿ ತೋರಿದರು.
ಇಂದು ಗೋಕಾಕ್ ತಾಲೂಕಿನ ಹೊರವಲಯದಲ್ಲಿರುವ ದಡ್ಡಿ ಬಸವಣ್ಣ ಏತ ನೀರಾವರಿ ಸ್ಥಳಕ್ಕೆ ಸಚಿವ ಮಾಧುಸ್ವಾಮಿ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಶಾಸಕರು ಕಾಣಿಸಿಕೊಳ್ಳದ ಕಾರಣ ಕೇವಲ ಸಚಿವರು ಮಾತ್ರ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬೇಕಾದ ಶಾಸಕರೇ ಹಾಜರಾಗದಿರುವುದು ವಿಪರ್ಯಾಸವಾಗಿದೆ.