ಬೆಳಗಾವಿ : 2ಎ ಮೀಸಲಾತಿಯಲ್ಲಿ ಯಾವ ಯಾವ ಸಮುದಾಯಗಳಿವೆಯೋ ಇವುಗಳ ಮೀಸಲಾತಿಯನ್ನು ಕಸಿಯುವುದಿಲ್ಲ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಅನ್ಯರಿಗೆ 2ಎ ಮೀಸಲಾತಿ ನೀಡದಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಮನವಿ ಆಲಿಸಿ ಭರವಸೆ ನೀಡಿದರು.
2ಎ ಮೀಸಲಾತಿಯಲ್ಲಿ ಇಟ್ಟಿರುವ ಮೀಸಲಾತಿ ಯಾರಿಗೂ ಹಂಚುವುದಿಲ್ಲ: ಸಚಿವ ಶ್ರೀನಿವಾಸ ಪೂಜಾರಿ - ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ
ಮೀಸಲಾತಿ ವಿಚಾರವಾಗಿ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಭಟನಾಕಾರರ ಮನವಿ ಆಲಿಸಿದರು.
2ಎ ಮೀಸಲಾತಿಯಲ್ಲಿ ಇರುವ ಮೀಸಲಾತಿಯನ್ನು ಕಸಿಯುವುದಿಲ್ಲ: ಸಚಿವ ಶ್ರೀನಿವಾಸ ಪೂಜಾರಿ
2ಎ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುವುದಿಲ್ಲ. 2ಎಯಲ್ಲಿ ಯಾವೆಲ್ಲ ಸಮುದಾಯಗಳಿವೆಯೋ ಅವುಗಳಿಗೆ ಮೀಸಲಾತಿ ಹಂಚಿಕೆ ಮಾಡುವಾಗ ಯಾವುದೇ ತೊಂದರೆ ಆಗದಂತೆ ಸಿಎಂ ಜೊತೆ ಚರ್ಚಿಸಲಾಗಿದೆ. ಈ ವಿಚಾರದಲ್ಲಿ 2ಎ ಮೀಸಲಾತಿಯಲ್ಲಿರುವರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.