ಕರ್ನಾಟಕ

karnataka

ನಾಮಪತ್ರ ಸಲ್ಲಿಕೆಗೆ ರಮೇಶ್ ಜಾರಕಿಹೊಳಿ‌ ಬರ್ತಾರೆ : ಸಚಿವ ಜಗದೀಶ್ ಶೆಟ್ಟರ್​

By

Published : Mar 29, 2021, 9:43 PM IST

ಚುನಾವಣಾ ಘೋಷಣೆ ಮುನ್ನವೇ ಬೂತ್ ಮಟ್ಟದ ಸಭೆ ಮಾಡಿದ್ದಾರೆ. ಉತ್ತಮ ಸಂಘಟನೆ, ಮೋದಿ, ಬಿಎಸ್‌ವೈ ನಾಯಕತ್ವದಲ್ಲಿ ಉತ್ತಮ ಸರ್ಕಾರ ಕೊಡ್ತಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ಎಲ್ಲ ಉಪಚುನಾವಣೆಯಲ್ಲಿ ಗೆದ್ದಿದ್ದೇವೆ. ಅದೇ ರೀತಿ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ವಿಶ್ವಾಸವಿದೆ..

minister-jadaish-shetter
ಸಚಿವ ಜಗದೀಶ್ ಶೆಟ್ಟರ್​

ಬೆಳಗಾವಿ :ನಾಳೆ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ರಮೇಶ್ ಜಾರಕಿಹೊಳಿ‌, ಬಾಲಚಂದ್ರ ಜಾರಕಿಹೊಳಿ ಇಬ್ಬರೂ ಬರಲಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಇವರಷ್ಟೇ ಅಲ್ಲ, ಸಿಎಂ ಬಿಎಸ್‌ವೈ, ಸಚಿವ ಕೆ ಎಸ್ ಈಶ್ವರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ ಸೇರಿ ಇತರ ನಾಯಕರು ಭಾಗಿಯಾಗಲಿದ್ದಾರೆ ಎಂದಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಾಳೆ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಈಗಾಗಲೇ ಚುನಾವಣಾ ಪ್ರಚಾರ ಪೂರ್ವಭಾವಿ ಸಭೆ ಮಾಡಿದ್ದೇವೆ. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ತೀರ್ಮಾನ ಮಾಡಿದ್ದೇವೆ. ಪಕ್ಷದ ಕಾರ್ಯಕರ್ತರಿಂದ ಎಲ್ಲರೂ ಲೋಕಸಭಾ ಕ್ಷೇತ್ರದಲ್ಲಿ ಗ್ರೌಂಡ್‌ಲೆವೆಲ್ ಕೆಲಸ ಮಾಡ್ತಿದಾರೆ.

ಚುನಾವಣಾ ಘೋಷಣೆ ಮುನ್ನವೇ ಬೂತ್ ಮಟ್ಟದ ಸಭೆ ಮಾಡಿದ್ದಾರೆ. ಉತ್ತಮ ಸಂಘಟನೆ, ಮೋದಿ, ಬಿಎಸ್‌ವೈ ನಾಯಕತ್ವದಲ್ಲಿ ಉತ್ತಮ ಸರ್ಕಾರ ಕೊಡ್ತಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ಎಲ್ಲ ಉಪಚುನಾವಣೆಯಲ್ಲಿ ಗೆದ್ದಿದ್ದೇವೆ. ಅದೇ ರೀತಿ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಸುರೇಶ್ ಅಂಗಡಿ ಮಾಡಿದ ಕೆಲಸಗಳು ಇನ್ನೂ ಜನಮಾನಸದಲ್ಲಿವೆ. ಬೆಳಗಾವಿಯಲ್ಲಿ ಬಹಳ ವರ್ಷದ ಕನಸು ಈಡೇರಿಸುವ ಕೆಲಸವನ್ನು ಅಂಗಡಿ ಮಾಡಿದ್ದಾರೆ. ಬೆಳಗಾವಿ-ಕಿತ್ತೂರು -ಧಾರವಾಡ ರೈಲು ಮಾರ್ಗಕ್ಕೆ 900 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. ಹೀಗಾಗಿ, ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದರು.

ಇದನ್ನೂ ಓದಿ:ಸಿಡಿ ಪ್ರಕರಣದಿಂದ ಉಪಚುನಾವಣೆಗೆ ತೊಂದರೆಯಾಗಲ್ಲ: ಸಚಿವ ಶ್ರೀಮಂತ ಪಾಟೀಲ್​​

ABOUT THE AUTHOR

...view details