ಬೆಳಗಾವಿ:ಅನ್ಯಪಕ್ಷದ ಶಾಸಕರನ್ನು ಬಿಜೆಪಿಗೆ ಕರೆತರುವ ಸಾಮರ್ಥ್ಯ ರಮೇಶ್ ಜಾರಕಿಹೊಳಿ ಅವರಿಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಓರ್ವ ಸಮರ್ಥ ನಾಯಕ. ಮಾಜಿ ಸಚಿವರೂ ಆಗಿರುವ ಅವರು ಅನುಭವಿ ರಾಜಕಾರಣಿ. ಅನ್ಯ ಪಕ್ಷದ ಶಾಸಕರು ಅವರ ಸಂಪರ್ಕದಲ್ಲಿರಬಹುದು ಎಂದರು.
ಹೀಗಾಗಿ ಅವರು ಬಿಜೆಪಿಗೆ ಎಷ್ಟು ಜನರನ್ನು ಬೇಕಾದರೂ ಕರೆ ತರಬಹುದು. ಅವರಲ್ಲಿ ಆ ಶಕ್ತಿ ಇದೆ. ಜಾರಕಿಹೊಳಿ ಎಷ್ಟು ಜನ ಶಾಸಕರನ್ನು ಬೇಕಾದರೂ ಕರೆತರಬಹುದು. ಅವರೊಂದಿಗೆ ಸಂಪರ್ಕದಲ್ಲಿರುವುವವರು ಬಿಜೆಗೆ ಬರಬಹುದು ಎಂದು ಆಹ್ವಾನ ನೀಡಿದರು. ಆದರೆ ಈ ಕುರಿತಂತೆ ಎಷ್ಟು ಜನ ಶಾಸಕರು ಸಂಪರ್ಕದಲ್ಲಿದ್ದಾರೆಂದು ನನಗೆ ಗೊತ್ತಿಲ್ಲ. ಬಿಜೆಪಿಯು ಎಲ್ಲರ ಶಕ್ತಿಯನ್ನು ಬಳಸಿಕೊಳ್ಳಲು ಸಮರ್ಥವಿದೆ ಎಂದು ಹೇಳಿದ್ದಾರೆ.