ಕರ್ನಾಟಕ

karnataka

ETV Bharat / state

ಆನೆ ಹೋಗುವಾಗ ಶ್ವಾನ ಬೊಗಳಿದರೆ ಏನೂ ಆಗಲ್ಲ: ಎಂಇಎಸ್ ವರ್ತನೆಗೆ ಕಾರಜೋಳ ಪ್ರತಿಕ್ರಿಯೆ - ಎಂಇಎಸ್ ವರ್ತನೆಗೆ ಕಾರಜೋಳ ಪ್ರತಿಕ್ರಿಯೆ

ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಆಗಾಗ ಪುಂಡಾಟ ಮಾಡುತ್ತಿರುತ್ತಾರೆ. ಇದೀಗ ಮಹಾರಾಷ್ಟ್ರದ ನಕಾಶೆಯಲ್ಲಿ ಕರ್ನಾಟಕದ ಗಡಿಭಾಗ ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದರು.

Minister Govind karjol
ಗೋವಿಂದ ಕಾರಜೋಳ

By

Published : Nov 1, 2021, 8:31 PM IST

ಬೆಳಗಾವಿ:ಆನೆ ಹೋಗುವಾಗ ಶ್ವಾನ ಬೊಗಳಿದರೆ ಏನೂ ಆಗಲ್ಲ ಎಂದು ಎಂಇಎಸ್ ಕಾರ್ಯಕರ್ತರ ವರ್ತನೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.

ಎಂಇಎಸ್ ವರ್ತನೆಗೆ ಸಚಿವ ಕಾರಜೋಳ ಪ್ರತಿಕ್ರಿಯೆ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವು ಕಿಡಿಗೇಡಿಗಳು ಗಡಿ ವಿವಾದ ಜೀವಂತವಾಗಿಡಲು ಉಪದ್ರವ ಮಾಡುತ್ತಾರೆ. ಅಂತಹವರಿಗೆ ಬೆಲೆ ಕೊಡುವ ಅವಶ್ಯಕತೆ ಇಲ್ಲ. ಸಿಟ್ಟನ್ನು ಸಿಟ್ಟಿನಿಂದ ಶಮನ ಮಾಡಲು ಸಾಧ್ಯವಿಲ್ಲ. ಪ್ರೀತಿ, ವಿಶ್ವಾಸದಿಂದ ಎಲ್ಲರನ್ನೂ ಒಟ್ಟಾಗಿ ಸರ್ಕಾರ ತೆಗೆದುಕೊಂಡು ಹೋಗಲಿದೆ ಎಂದರು.

ಪ್ರತಿ 50 ಕಿ.ಮೀಗೆ ಭಾಷೆ ಬದಲಾಗುತ್ತದೆ. ಅದನ್ನು ನೆಪವಾಗಿಟ್ಟುಕೊಂಡು ಹೋರಾಟ ಮಾಡಬಾರದು. ನಾವು ಪಾಕಿಸ್ತಾನದ ಜೊತೆಗೆ ಕಚ್ಚಾಡಿದ ಹಾಗೆ ಕರ್ನಾಟಕ, ಮಹಾರಾಷ್ಟ್ರ ಎಂದು ಹೋರಾಟ ಮಾಡಬಾರದು. ಮಾತೃ ಭಾಷೆ ಮನೆಯಲ್ಲಿರಲಿ, ಆದರೆ ಕಲಿಕೆ ಹಾಗೂ ವ್ಯವಹಾರಿಕವಾಗಿ ನಾಡಭಾಷೆಯನ್ನು ಬೆಳೆಸಬೇಕು. ಮೊದಲು ಕನ್ನಡ ಹೋರಾಟಗಾರರು, ಪತ್ರಕರ್ತರ ಮೇಲೆ ಹಲ್ಲೆ ನಡೆಯುತ್ತಿದ್ದವು. ಆದರೀಗ ಬೆಳಗಾವಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ವಿಶ್ವಕನ್ನಡ ಸಮ್ಮೇಳನ, ಸಾಹಿತ್ಯ ಸಮ್ಮೇಳನ ವೇಳೆ ಭಾಷೆ ಮರೆತು ಎಲ್ಲರೂ ಒಟ್ಟಾಗಿದ್ದರು, ಕಾರ್ಯಕ್ರಮ ಯಶ್ವಸಿಗೊಳಿಸಿದರು ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಬೆಳಗಾವಿ ಜಿಲ್ಲೆಗೆ ಅನ್ಯಾಯವಾಗಿದೆ. ಈ ಬಗ್ಗೆ ನನಗೂ ಅಸಮಾಧಾನ ಇದೆ. ಕನಿಷ್ಠ ಮೂರು ಪ್ರಶಸ್ತಿಯಾದರೂ ಜಿಲ್ಲೆಗೆ ಸಿಗಬೇಕಿತ್ತು. ಮುಂದಿನ ವರ್ಷ ಇದನ್ನು ಸರಿಪಡಿಸುವ ಭರವಸೆ ನೀಡಿದರು.

ಇದನ್ನೂ ಓದಿ: MES ಪುಂಡಾಟಿಕೆ: ಮಹಾರಾಷ್ಟ್ರ ನಕಾಶೆಯಲ್ಲಿ ಬೆಳಗಾವಿ ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್

ABOUT THE AUTHOR

...view details