ಬೆಳಗಾವಿ:ಸಣ್ಣ ವಯಸ್ಸಿನಲ್ಲಿಯೇ ರಾಜಕೀಯ ರಂಗ ಪ್ರವೇಶಿಸಿ ಸವದತ್ತಿ ಇತಿಹಾಸದಲ್ಲಿ ಮೂರು ಬಾರಿ ಆನಂದ ಮಾಮನಿ ಆಯ್ಕೆಯಾಗಿದ್ದರು. ತಮ್ಮ ವ್ಯಕ್ತಿತ್ವದ ಮುಖಾಂತರ ಸಮಾಜಮುಖಿ ಕೆಲಸ ಮಾಡಿ ಸತತ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದರು. ಆದರೆ, ಅತೀ ಸಣ್ಣ ವಯಸ್ಸಿನಲ್ಲೇ ಆನಂದ ಮಾಮನಿಯವರನ್ನ ಕಳೆದುಕೊಂಡಿದ್ದೇವೆ ಎಂದು ಸಚಿವ ಸಿ. ಸಿ ಪಾಟೀಲ್ ಕಂಬನಿ ಮಿಡಿದರು.
ಸವದತ್ತಿ ಪಟ್ಟಣದಲ್ಲಿ ಆನಂದ ಮಾಮನಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಮನಿ ಸವದತ್ತಿ ರಾಜಕೀಯ ಇತಿಹಾಸದಲ್ಲಿ ಮೂರು ಬಾರಿ ಆಯ್ಕೆಯಾದರು. ತಮ್ಮ ವ್ಯಕ್ತಿತ್ವದ ಮುಖಾಂತರ ಸಮಾಜಮುಖಿ ಕೆಲಸ ಮಾಡಿದರು. ಸತತ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದರು ಎಂದು ನೆನೆದರು.
ಅವರ ತಂದೆ ನನ್ನ ರಾಜಕೀಯ ಗುರು. ಅವರ ಸ್ಥಾನವನ್ನು ಅಲಂಕರಿಸಿ ಅನ್ಯೋನ್ಯವಾಗಿದ್ದರು. ಸಭಾ ಉಪಸಭಾಪತಿಗಳು ಅಂತಾ ಕರೆದ್ರೆ ಹಾಗೇ ಅನ್ನಬೇಡಿ ಆನಂದ ಅಂತಲೇ ಕರೀರಿ ಅಂತಿದ್ದರು. ಯಾಕೋ ಏನೋ ನಮ್ಮ ಬೆಳಗಾವಿಯ ದುರಾದೃಷ್ಟ ಇತ್ತೀಚೆಗೆ ಸಚಿವ ಉಮೇಶ್ ಕತ್ತಿ ಅವರನ್ನು ಕಳೆದುಕೊಂಡಿದ್ದೇವೆ. ಅತೀ ಸಣ್ಣ ವಯಸ್ಸಿನ ಆನಂದ ಮಾಮನಿಯವರು ನಮ್ಮನ್ನೆಲ್ಲಾ ಅಗಲಿದ್ದಾರೆ ಎಂದರು.
ನನ್ನ ದುರಾದೃಷ್ಟ ಅವರ ತಂದೆ ಹಾಗೂ ಆನಂದ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತಾಗಿದೆ. ಬಹಳ ನೋವಾಗುತ್ತಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ. ಎರಡು ತಿಂಗಳ ಹಿಂದೆ ನನ್ನ ಹುಟ್ಟೂರಿಗೆ ಬಂದಿದ್ದರು. ರಸ್ತೆ ಕಾಮಗಾರಿ ಉದ್ಘಾಟನೆಗೆ ಅವರನ್ನು ಕರೆಯಿಸಿದಾಗ ಮಾತನಾಡಿದ್ದೆವು. ಆಸ್ಪತ್ರೆಯಲ್ಲಿ ಅವರನ್ನು ಭೇಟಿಯಾಗಿ ಬಂದಿದ್ದೆ ಎಂದು ಹೇಳಿದರು.
ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿಯವರ ಅಂತಿಮ ದರ್ಶನ ಪಡೆದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್