ಕರ್ನಾಟಕ

karnataka

ETV Bharat / state

ಇಂದು ತಮ್ಮ ರಾಜಕೀಯ ನಿವೃತ್ತಿ ಘೋಷಿಸಲಿ: ಸಿದ್ದರಾಮಯ್ಯಗೆ ಸಚಿವ ಅಶ್ವತ್ಥ್ ನಾರಾಯಣ​ ಟಾಂಗ್

ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯರ ಜನ್ಮದಿನಕ್ಕೆ ಹೃದಯಪೂರ್ವಕ ಶುಭಾಶಯಗಳು. ಸಿದ್ದರಾಮಯ್ಯಗೆ ಭಗವಂತ ಆಯುರಾರೋಗ್ಯ ಎಲ್ಲ ಕರುಣಿಸಲಿ ಅಂತಾ ಪ್ರಾರ್ಥಿಸುತ್ತೇನೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.

ಸಚಿವ ಅಶ್ವತ್ಥ್ ನಾರಾಯಣ್​
ಸಚಿವ ಅಶ್ವತ್ಥ್ ನಾರಾಯಣ್​

By

Published : Aug 3, 2022, 5:43 PM IST

ಬೆಳಗಾವಿ: ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯರ ಅಮೃತ ಮಹೋತ್ಸವ ಕುರಿತು ಪ್ರತಿಪಕ್ಷ ನಾಯಕರಿಗೆ ಶುಭ ಕೋರುತ್ತಲೇ ಸಿದ್ದರಾಮಯ್ಯ ಇಂದು ತಮ್ಮ ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ಸಚಿವ ಅಶ್ವತ್ಥ್ ನಾರಾಯಣ ಒತ್ತಾಯಿಸಿದ್ದಾರೆ.

ನಗರದಲ್ಲಿ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೀಬೇಕಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು, ನೂರಕ್ಕೆ ನೂರು ರಿಟೈರ್‌ಮೆಂಟ್ ಪಡೆಯಬೇಕು. ಔಟ್‌ಡೇಟೆಡ್ ಮಾಡೆಲ್‌ಗಳು ಎಲ್ಲಾ ಆಯ್ತು. ಏನೋ ಒಂದ್ ಐದು ವರ್ಷ ಆಯ್ತು ಅಂತಾ ಜನ ಭಾರ ಹೊತ್ತು ಮಾಡಿದ್ರು. ಇನ್ಮುಂದೆ ಯಾರೀ ಭಾರ ಹೊರೋರು? ಇವರ ಭಾರವನ್ನು ಹೊತ್ತುಕೊಂಡು ಎಲ್ಲಿಗೆ ಹೋಗಬೇಕು.

ನಿವೃತ್ತಿ ಘೋಷಣೆ ಮಾಡಲಿ ಅಂತಾ ವಿನಂತಿಸುತ್ತೇನೆ‌:ಇವರ ಮೋಜು ಮಸ್ತಿ ಏನ್ರಿ?‌. ಇವರ ಕಥೆ ಏನ್ರಿ, ಯಾವ ಉದ್ದೇಶ, ಎಲ್ಲವನ್ನೂ ಮರೆತಿದ್ದಾರೆ. ಇವತ್ತು ಇಂತಹ ಮಹಾಪುರುಷರ ಜನುಮ ದಿನ ಆಗ್ತಿದೆ. ಯಾವ ಕಾರಣಕ್ಕೆ ಜನ್ಮದಿನ ಆಗ್ತಿದೆ ಗೊತ್ತಿಲ್ಲ. ಏನ್ ಕೊಡುಗೆ ಕೊಟ್ಟಿದ್ದಾರೋ ಗೊತ್ತಿಲ್ಲ. ಇಂತವರದ್ದು ಆಗುತ್ತೆ, ಆಗಲಿ. ಅವರ ಭಾವನೆಗಳಿಗೆ ನಾನು ಅಗೌರವ ಕೊಡುವಂತದ್ದು ಆಗಬಾರದು. ಒಟ್ಟಾರೆ ಇದು ಅಪ್ರಸ್ತುತ. ಇಂದು ಅವರು ನಿವೃತ್ತಿ ಘೋಷಣೆ ಮಾಡಲಿ ಅಂತಾ ವಿನಂತಿಸುತ್ತೇನೆ‌ ಎಂದರು.

ಸಚಿವ ಅಶ್ವತ್ಥ್ ನಾರಾಯಣ​ ಮಾತನಾಡಿರುವುದು

ಸಿದ್ದರಾಮಯ್ಯರ ಜನ್ಮದಿನಕ್ಕೆ ಹೃದಯಪೂರ್ವಕ ಶುಭಾಶಯಗಳು. ಸಿದ್ದರಾಮಯ್ಯಗೆ ಭಗವಂತ ಆಯುರಾರೋಗ್ಯ ಎಲ್ಲ ಕರುಣಿಸಲಿ ಅಂತಾ ಪ್ರಾರ್ಥಿಸುತ್ತೇನೆ. ಸಮಾಜದಲ್ಲಿ ರಾಜಕೀಯ ಪಕ್ಷದ ನಾಯಕನ ಯಾವುದೇ ಕಾರ್ಯಕ್ರಮ ಇದ್ದರೂ ರಾಜಕೀಯ ಕಾರ್ಯಕ್ರಮವೇ ಆಗುತ್ತದೆ. ಒಂದು ಶಕ್ತಿ ತುಂಬಿಕೊಳ್ಳುವ ಕಾರ್ಯಕ್ರಮ. ಶಕ್ತಿ ಕೊಡುವಂತ ಕಾರ್ಯಕ್ರಮ. ಅವರವರು ಪ್ರಯತ್ನ ಮಾಡಬೇಕು. ಒಳ್ಳೆಯ ವಿಚಾರಕ್ಕೆ, ಒಳ್ಳೆಯ ಉದ್ದೇಶಕ್ಕಾಗಿ ಏನೇ ಮಾಡಿದರೂ ಒಳ್ಳೆಯದು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡ ಪಕ್ಷ: ಸಿದ್ದರಾಮಯ್ಯರ ಶಕ್ತಿ ಪ್ರದರ್ಶನವಾ ಅಂತಾ ಮಾಧ್ಯಮಗಳ ಪ್ರಶ್ನೆಗೆ, ಎಲ್ಲರೂ ಶಕ್ತಿ ಪ್ರದರ್ಶನ ಮಾಡಬೇಕು. ಮಾಡ್ತಾರೆ ಏನ್ ತಪ್ಪೇನಿಲ್ಲ. ಜನರ ವಿಶ್ವಾಸ ಪಡೆದು ಜನರ ಆಶೀರ್ವಾದ, ಬೆಂಬಲ ಪಡೆಯಬೇಕು. ಇದೊಂದು ಶುಭ ಸಂದರ್ಭ. 75ನೇ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಹಿಂದೆ ಆಗಿಬಿಟ್ಟಿದ್ದಾರೆ. ಇನ್ಮುಂದೆ ಆಗಲ್ಲ. ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡ ಪಕ್ಷ. ಪ್ರಸ್ತುತವಾದ ಪಕ್ಷ ಅಲ್ಲ.

ವಿಚಾರ, ಧ್ಯೇಯೋದ್ದೇಶಗಳ ಸ್ಪಷ್ಟತೆ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕಾಗಿ ಹಾತೊರೆಯುವಂತಹ ಪಕ್ಷವಾಗಿದೆ. ಇಂದು ಇಡೀ ದೇಶದಲ್ಲಿ ಉತ್ತಮವಾದ ಬುನಾದಿ ಹಾಕದೇ ಇದ್ದ ಪಕ್ಷ ಕಾಂಗ್ರೆಸ್. ಇಂದು ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡಲು ಮೂಲಪುರುಷರು, ಕಾರಣಿಕರ್ತರು ಕಾಂಗ್ರೆಸ್ ಪಕ್ಷದವರು. ಭ್ರಷ್ಟಾಚಾರ ಸಂಸ್ಕೃತಿಯನ್ನು ತಂದಿದ್ದು ಅವರೇ. ಅದನ್ನ ಕ್ಲೀನ್ ಮಾಡಬೇಕು ಎಂದು ಸಚಿವರು ಟೀಕಿಸಿದರು.

ಮ್ಯೂಸಿಯಂ ಸೇರುವ ಕಾಲ ಬಂದಿದೆ : ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿ ಒಗ್ಗಟ್ಟಿನ ಜಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಪಕ್ಷ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಅವರ ಪಕ್ಷ ಸಂಪೂರ್ಣ ನೆಲೆ, ವಿಶ್ವಾಸ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷ ಕೆಲವೇ ವರ್ಷಗಳಲ್ಲಿ ಮ್ಯೂಸಿಯಂ ಸೇರಿಕೊಳ್ಳುತ್ತದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಇತ್ತಪ್ಪಾ ಅಂತಾ ಮ್ಯೂಸಿಯಂ ಸೇರುವ ಕಾಲ ಬಂದಿದೆ ಎಂದು ವ್ಯಂಗ್ಯವಾಡಿದರು.

ಡಿಕೆಶಿ, ಸಿದ್ದರಾಮಯ್ಯ ಒಂದಾಗ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾವ ವಿಚಾರದಲ್ಲಿ ಒಂದು ಆಗ್ತಾರೆ?. ಯಾವ ತತ್ವ? ಯಾವ ಮೌಲ್ಯದ ಮೇಲೆ ಆಗ್ತಾರೆ.‌ ಎಲ್ಲರೂ ಸಿಎಂ ಸ್ಥಾನಕ್ಕೆ ನಾನು ನಾನು ಅಂತಾ ಅರ್ಜಿ ಹಾಕಿದ್ದಾರೆ. ವಯಸ್ಸಾದವರು, ಯುವಕರು, ಮಧ್ಯಮ ವಯಸ್ಸಿನವರು ಅರ್ಜಿ ಹಾಕಿದ್ದಾರೆ. ಈಗಿನ ಕಾಲಕ್ಕೆ ಇವರೆಲ್ಲ ಸಂಪೂರ್ಣವಾಗಿ ಅಪ್ರಸ್ತುತವಾಗಿದ್ದಾರೆ. ಇವರು ಈಗ ಮಾರ್ಗದರ್ಶಿಗಳಾಗಿ ಆಶೀರ್ವಾದ ಮಾಡಿಕೊಂಡು ಇರಬೇಕು ಎಂದು‌ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಅಶ್ವತ್ಥ್ ನಾರಾಯಣ ಟಾಂಗ್ ನೀಡಿದ್ದಾರೆ.

ಓದಿ:ಸಿದ್ದರಾಮಯ್ಯ ಅಮೃತಮಹೋತ್ಸವ.. ಮಾಜಿ ಸಿಎಂಗೆ ರೇಷ್ಮೆ ಶಾಲು ಹೊದಿಸಿ ಶುಭಾಶಯ ಕೋರಿದ ಡಿಕೆಶಿ

ABOUT THE AUTHOR

...view details