ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ಅವರವನ್ನು ಮಾಜಿ ಸಿಎಂ ಎಂದು ಕರೆಯಲು ಮನಸ್ಸು ಒಪ್ಪುತ್ತಿಲ್ಲ : ಸಚಿವ ಆನಂದ್ ಸಿಂಗ್ - ಮಾಜಿ ಸಿಎಂ ಯಡಿಯೂರಪ್ಪ

15 ದಿನಗಳಲ್ಲಿ ವಿಜಯನಗರ ಜಿಲ್ಲೆಯ ಆಡಳಿತ ಯಂತ್ರ ಕಾರ್ಯಾರಂಭ ಆಗುವ ಸಾಧ್ಯತೆ ಇದೆ. ಈ ಸಂಬಂಧ ಸಿಎಂ ಸೇರಿದಂತೆ, ಹಣಕಾಸು ಇಲಾಖೆ ಸಮ್ಮತಿ ಸೂಚಿಸಿದೆ. ಒಂದು ಸಭೆಯಾಗಬೇಕಿದೆ. ಆದಾದ ಬಳಿಕ ಎಸ್​​​​​​ಪಿ, ಡಿಸಿ, ಸಿಇಒ ಭಾಗಿಯಾಗಲಿದ್ದಾರೆ..

Minister Anand sing
ಸಚಿವ ಆನಂದ್ ಸಿಂಗ್

By

Published : Aug 6, 2021, 3:33 PM IST

ಹೊಸಪೇಟೆ(ವಿಜಯನಗರ) :ನಾವು ಕೇಳಿದ ಖಾತೆ ಕೊಟ್ಟರೆ ಇನ್ನಷ್ಟು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಇದಾದ ಮೇಲೂ ಪಕ್ಷ ಯಾವ ಖಾತೆ ಕೊಟ್ಟರೂ ನಿಭಾಯಿಸಲು ಸಿದ್ಧರಿದ್ದೇವೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಯಡಿಯೂರಪ್ಪನವರನ್ನು ಮಾಜಿ ಸಿಎಂ ಅಂತಾ ಕರೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಪಕ್ಷದ ಹಿರಿಯ ನಾಯಕರವರು, ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಯಡಿಯೂರಪ್ಪ ಮಾರ್ಗದರ್ಶನ ನೀಡಲಿದ್ದಾರೆ. ಹಾಗಂತಾ, ಬೊಮ್ಮಾಯಿಯವರು ಯಡಿಯೂರಪ್ಪನವರ ಕೈಗೊಂಬೆ ಅಂತಾ ಹೇಳೋಕಾಗುತ್ತಾ ಎಂದು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಮಾಜಿ ಸಿಎಂ ಎಂದು ಕರೆಯಲು ಮನಸ್ಸು ಒಪ್ಪುತ್ತಿಲ್ಲ: ಸಚಿವ ಆನಂದ್ ಸಿಂಗ್

15 ದಿನಗಳಲ್ಲಿ ವಿಜಯನಗರ ಜಿಲ್ಲೆಯ ಆಡಳಿತ ಯಂತ್ರ ಕಾರ್ಯಾರಂಭ ಆಗುವ ಸಾಧ್ಯತೆ ಇದೆ. ಈ ಸಂಬಂಧ ಸಿಎಂ ಸೇರಿದಂತೆ, ಹಣಕಾಸು ಇಲಾಖೆ ಸಮ್ಮತಿ ಸೂಚಿಸಿದೆ. ಒಂದು ಸಭೆಯಾಗಬೇಕಿದೆ. ಆದಾದ ಬಳಿಕ ಎಸ್​​​​​​ಪಿ, ಡಿಸಿ, ಸಿಇಒ ಭಾಗಿಯಾಗಲಿದ್ದಾರೆ.

ಗಣೇಶ ಚತುರ್ಥಿ ದಿನದಂದು ವಿಜಯನಗರ ಜಿಲ್ಲೆ ಉದ್ಘಾಟನೆಗೆ ಸಿದ್ಧತೆ ನಡೆದಿದೆ. ಸಿಎಂ ಸೇರಿದಂತೆ ಹಲವು ಗಣ್ಯಮಾನ್ಯರು ಭಾಗವಹಿಸುವ ಸಾಧ್ಯತೆ ಇದೆ. ಕೊರೊನಾ 3ನೇ ಅಲೆ ಅಡ್ಡಿಯಾದ್ರೆ ಸರಳವಾಗಿ ವಿಜಯನಗರ ಜಿಲ್ಲೆ ಉದ್ಘಾಟನೆ ಆಗಲಿದೆ ಎಂದರು.

ಓದಿ:ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದೆ ಸುಮಲತಾ ಅಂಬರೀಷ್​​

ABOUT THE AUTHOR

...view details