ಬೆಳಗಾವಿ:ನಮ್ಮ ಎದುರಾಳಿಗಳು ನಮ್ಮನ್ನು ಪ್ರಚೋದಿಸುವ ಮಾತು ಆಡಿದಷ್ಟು ನಮ್ಮ ಸೈನಿಕರಲ್ಲಿ ತಿರುಗೇಟು ನೀಡುವ ಹುಮ್ಮಸ್ಸು ಹೆಚ್ಚಾಗುತ್ತದೆ. ಪಾಕಿಸ್ತಾನಕ್ಕೆ ಪಾಠ ಕಲಿಸಲು ನಮ್ಮ ಸೈನ್ಯ ಸಮರ್ಥವಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಪಿ.ಜಿ. ಎಸ್ ಪನ್ನು ಹೇಳಿದ್ದಾರೆ.
ಪಾಕ್ ಯುದ್ಧದ ಬಗ್ಗೆ ಮಾತನಾಡಿದಷ್ಟು ನಮ್ಮ ಸೈನಿಕರ ಆತ್ಮಸ್ಥೈರ್ಯ ಹೆಚ್ಚುತ್ತಿದೆ: ಲೆಫ್ಟಿನೆಂಟ್ ಜನರಲ್ ಪನ್ನು - ಮರಾಠಾ ಲಘು ದಳದ ತರಬೇತಿ ಮೈದಾನ
ಪಾಕಿಸ್ತಾನ ಯುದ್ಧದ ಬಗ್ಗೆ ಮಾತನಾಡಿದಷ್ಟು ನಮ್ಮ ಸೈನಿಕರ ಆತ್ಮಬಲ ಜಾಸ್ತಿಯಾಗುತ್ತದೆ. ಯುದ್ಧ ಭೂಮಿಯಲ್ಲಿ ಶತ್ರು ಸೈನ್ಯವನ್ನು ಸೋಲಿಸುವಷ್ಟು ಭಾರತೀಯ ಸೈನ್ಯ ಸಮರ್ಥವಾಗಿದ್ದು, ಯುದ್ಧ ನಡೆದರೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಲೆಫ್ಟಿನೆಂಟ್ ಜನರಲ್ ಪಿ.ಜಿ.ಎಸ್ ಪನ್ನು ಹೇಳಿದ್ದಾರೆ.
ಪಿ.ಜಿ.ಎಸ್ ಪನ್ನು
ಮರಾಠಾ ಲಘು ದಳದ ತರಬೇತಿ ಮೈದಾನದಲ್ಲಿ ನಡೆದ ಸೈನಿಕ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಾಕಿಸ್ತಾನ ಯುದ್ಧದ ಬಗ್ಗೆ ಮಾತನಾಡಿದಷ್ಟು ನಮ್ಮ ಸೈನಿಕರ ಆತ್ಮಬಲ ಹಚ್ಚಾಗುತ್ತಿದೆ. ಯುದ್ಧ ನಡೆದರೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಭಾರತೀಯ ಸೈನ್ಯದಲ್ಲಿ ಕಾರ್ಯ ನಿರ್ವಹಿಸುವ ಯೋಧರು. ಸರ್ವ ಧರ್ಮಗಳ ಸಮಾನತೆಯನ್ನು ಹೊಂದಿ, ಸಹೋದರರಂತೆ ಸೇವೆ ಸಲ್ಲಿಸಬೇಕು ಎಂದು ಅವರು ಕರೆ ನೀಡಿದರು.