ಚಿಕ್ಕೋಡಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಾರ್ಖಂಡ್ ಮೂಲದ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ.
ಚಿಕ್ಕೋಡಿಯಲ್ಲಿ ಜಾರ್ಖಂಡ್ ಮೂಲದ ಕಾರ್ಮಿಕ ಸಾವು: ಹಸಿವಿನಿಂದ ಅಸುನೀಗಿರುವ ಶಂಕೆ - ಕಾರ್ಮಿಕ ಸಾವು
ಹಸಿವು ತಡೆಯಲಾಗದೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬಿಹಾರ್ ಮೂಲದ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಹಸಿವು ತಾಳಲಾರದೆ ಅಸ್ವಸ್ಥಗೊಂಡು ಸತ್ತಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬಾಬುಲಾಲ್ ಸಿಂಗ್ (45) ಸಾವನ್ನಪ್ಪಿದ ಕಾರ್ಮಿಕ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲೇ ಖಾನಾಪುರದಿಂದ ಜಾರ್ಖಂಡ್ಗೆ ಹೊರಟಿದ್ದ 13 ಕಾರ್ಮಿಕರು, ಚಿಕ್ಕೋಡಿ ಬಳಿ ಆಗಮಿಸಿದಾಗ ಅವರನ್ನು ತಪಾಸಣೆಗಾಗಿ ಪೊಲೀಸರು ಆಸ್ಪತ್ರೆಗೆ ಕರೆ ತಂದಿದ್ರು. ಈ ವೇಳೆ ಬಾಬುಲಾಲ್ ಸಿಂಗ್‌ಗೆ ಸರಿಯಾಗಿ ಊಟ ಸಿಗದೆ ಅಸ್ವಸ್ಥನಾಗಿ ಸಾವನ್ನಪ್ಪಿರಬಹುದು ಎನ್ನಲಾಗ್ತಿದೆ.
ಆದರೆ, ಏಕಾಏಕಿ ಆತ ಸಾವನ್ನಪ್ಪಿದ್ದರಿಂದ ಜನರಲ್ಲಿ ಆತಂಕ ಮೂಡಿದ್ದು, ಸ್ಥಳಕ್ಕೆ ಚಿಕ್ಕೋಡಿ ತಹಶೀಲ್ದಾರ್ ಶುಭಾಷ ಸಂಪಗಾಂವಿ, ಚಿಕ್ಕೋಡಿ ಸಿಪಿಐ ಹಾಗೂ ಆರೋಗ್ಯಾಧಿಕಾರಿಗಳು ಭೇಟಿ ನೀಡಿ, ಉಳಿದ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.