ಚಿಕ್ಕೋಡಿ: ಲಾಕ್ಡೌನ್ ನಡುವೆಯೂ ಬಾವಿಗೆ ಈಜಲು ಹೋದ ಬಾಲಕ ನೀರುಪಾಲದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಜಾಬಾಪೂರ ಗ್ರಾಮದಲ್ಲಿ ನಡೆದಿದೆ.
ಲಾಕ್ಡೌನ್ ಮೀರಿಯೂ ಈಜಲು ಹೋದ ಯುವಕ ಬಾವಿಯಲ್ಲಿನ ಕಲ್ಲು ತಾಗಿ ಸಾವು - boy dies in chikkodi
ಲಾಕ್ಡೌನ್ ಆದೇಶವನ್ನೂ ಉಲ್ಲಂಘಿಸಿ ಈಜಲು ಹೋದ ಯುವಕನೊಬ್ಬ ಸಾವಿಗೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬಾಬಾಪೂರ ಗ್ರಾಮದಲ್ಲಿ ನಡೆದಿದೆ.
ಲಾಕ್ಡಾನ್ ನಡುವೆಯೇ ಈಜಲು ಹೋದ ಯುವಕ ಆಯತಪ್ಪಿ ನೀರಲ್ಲಿ ಬಿದ್ದು ಸಾವು
ತಾಲೂಕಿನ ಜಾಬಾಪೂರ ಗ್ರಾಮದ ಕಾರ್ತಿಕ ಆನಂದ ಘಸ್ತಿ(15) ಎಂಬ ಬಾಲಕ ಲಾಕ್ಡೌನ್ ಇದ್ದರೂ ಸಹ ಸಮೀಪದ ಬಾವಿಗೆ ಈಜಲು ಹೋಗಿ ಮೇಲಿನಿಂದ ಜಿಗಿಯುವಾಗ ಆಯತಪ್ಪಿ ಬಿದ್ದು ಕಲ್ಲು ತಾಗಿ ಸಾವನ್ನಪ್ಪಿದ್ದಾನೆ.
ಇನ್ನೂ ಸ್ಥಳಕ್ಕೆ ಹುಕ್ಕೇರಿ ಪಿಎಸ್ಐ ಶಿವಾನಂದ ಗುಡಗನಟ್ಟಿ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Mar 29, 2020, 8:26 PM IST