ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿರುವ ವೇಳೆಯೇ ನಾಡದ್ರೋಹಿ ಎಂಇಎಸ್ ಮತ್ತೊಮ್ಮೆ ಕನ್ನಡಿಗರನ್ನು ಕೆದಕಿದೆ. ಪಾಲಿಕೆ ಎದುರು ಅಳವಡಿಸಿರುವ ಧ್ವಜಸ್ತಂಭದ ಮೇಲೆ ಹಾರಾಡುತ್ತಿರುವ ಕನ್ನಡ ಧ್ವಜ ಅನಧಿಕೃತ ಎಂದು ಎಂಇಎಸ್ ಪುಂಡರು ಫೇಸ್ಬುಕ್ನಲ್ಲಿ ಫೋಸ್ಟ್ ಮಾಡಿದ್ದಾರೆ.
ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬಿಜೆಪಿ ಹಾಗೂ ರಾಜ್ಯ ಸರ್ಕಾರವನ್ನು ಟಾರ್ಗೆಟ್ ಮಾಡುವ ಭರದಲ್ಲಿ ಪಾಲಿಕೆ ಎದುರಿನ ಕನ್ನಡ ಧ್ವಜ ಅನಧಿಕೃತ ಎಂದಿದೆ. ಬಿಜೆಪಿಯಿಂದ ಮರಾಠಿಗರು ಕನ್ನಡಿಗರ ಮಧ್ಯೆ ಜಗಳ ಹಚ್ಚುವ ಯತ್ನ ಮಾಡುತ್ತಿದೆ ಎಂದು ಪೋಸ್ಟ್ ಮೂಲಕ ಟೀಕಿಸಿದೆ.