ಕರ್ನಾಟಕ

karnataka

ETV Bharat / state

ಗಡಿಯಲ್ಲಿ ಮತ್ತೆ ಎಂಇಎಸ್ ಪುಂಡಾಟಿಕೆ : ಡಿಸಿ ಆದೇಶ ವಿರೋಧಿಸಿ ಪ್ರತಿಭಟನೆ - ಮಅರಅತಿ

ಹಿಂಡಲಗಾದಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಾಗಿದೆ. ಪಿಡಿಒ ಮರಾಠಿ ಭಾಷೆಯಲ್ಲಿ ಆಡಳಿತ ನಡೆಸಿದ್ದಕ್ಕೆ ಅವರನ್ನು ಅಮಾನತು ಗೊಳಿಸಲಾಗಿದೆ. ಈ ಅಮಾನತು ಹಿಂಪಡೆಯಬೇಕು. ಇನ್ನು ಖಾನಾಪೂರ, ನಿಪ್ಪಾಣಿ ಹಾಗು ಅಥಣಿಗಳಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಾಗಿದ್ದು ಅಂಗಡಿ ಮುಂಗ್ಗಟ್ಟುಗಳಲ್ಲಿ ಮರಾಠಿ ನಾಮಫಲಕ ಹಾಕಲು ಅವಕಾಶ ನೀಡಬೇಕು ಎಂದು ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಜ್ಯ ಗಡಿಯಲ್ಲಿ ಮತ್ತೆ ಎಂಇಎಸ್ ಪುಂಡಾಟಿಕೆ

By

Published : Jul 15, 2019, 7:22 PM IST

ಬೆಳಗಾವಿ : ರಾಜ್ಯದ ಆಡಳಿತ ಭಾಷೆ ಕನ್ನಡ ಆದ್ದರಿಂದ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಹಾಗೂ 70 ಪ್ರತಿಶತ ಕಡ್ಡಾಯ ಕನ್ನಡ ಬಳಸಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ವಿರೋಧಿಸಿ ಎಂಇಎಸ್​ ವಿರೋಧ ವ್ಯಕ್ತಪಡಿಸಿದೆ.

ಇಂದು ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಎಂಇಎಸ್​ (ಮಹಾರಾಷ್ಟ್ರ ಏಕೀಕರಣ ಸಮಿತಿ) ಕಾರ್ಯಕರ್ತರು, ಜಿಲ್ಲಾಧಿಕಾರಿಗಳು ನೀಡಿರುವ ಆದೇಶದ ವಿರುದ್ಧ ಘೋಷಣೆ ಕೂಗಿ ಹಿಂಡಲಗಾದಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮರಾಠಿ ಭಾಷೆಯಲ್ಲಿ ಆಡಳಿತ ನಡೆಸಿದ್ದಕ್ಕೆ ಅವರನ್ನು ಅಮಾನತು ಗೊಳಿಸಲಾಗಿದೆ. ಈ ಅಮಾನತನ್ನು ಹಿಂಪಡೆಯಬೇಕು. ಇನ್ನು ಖಾನಾಪೂರ, ನಿಪ್ಪಾಣಿ ಹಾಗೂ ಅಥಣಿಗಳಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಾಗಿದ್ದು ಅಂಗಡಿ ಮುಂಗಟ್ಟುಗಳಲ್ಲಿ ಮರಾಠಿ ನಾಮಫಲಕ ಹಾಕಲು ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಆಗಿರುವುದರಿಂದ ಎಲ್ಲ ಸರಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಕನ್ನಡ ಭಾಷೆಯಲ್ಲಿಯೇ ವ್ಯವಹಾರಗಳು ನಡೆಯಬೇಕು. ಮತ್ತು ಬೆಳಗಾವಿ ಗಡಿಭಾಗ ಆಗಿರುವುದರಿಂದ ಕನ್ನಡಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಹಾಗೂ ಎಲ್ಲ ಅಂಗಡಿ ಮುಂಗಟ್ಟುಗಳ ನಾಮಫಲಕಗಳ ಮೇಲೆ ಮರಾಠಿಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಆದೇಶ ವಿರೋಧಿಸಿ ಪ್ರತಿಭಟನೆ ನಡೆದಿದೆ‌.

ABOUT THE AUTHOR

...view details